ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಸಾಪುರ!

Rashmi Kasaragodu
Updated On : 26 Jun 2014, 11:58 am

 ನಾರಾಯಣ ಸಗರ
ಕ.ಪ್ರ. ವಾರ್ತೆ    ಶಹಾಪುರ    ಜೂ. 25
ಹಳೇ ಕಾಲದಲ್ಲಿ ಖರೀದಿಸಿದ ಎರಡು ಮುರುಕು ಟ್ರ್ಯಾಕ್ಟರ್‌ಗಳು ಮತ್ತು ಹತ್ತುವರ್ಷದ ಹಿಂದಿರುವ ಕಾರ್ಮಿಕರ ಸಂಖ್ಯೆಯೇ ಈಗಲೂ ಇದೆ. ಹಾಗಂತ ಕಸ ಶೇಖರಣೆಗೊಳ್ಳುವ ಪ್ರಮಾಣ ಅಷ್ಟೇ ಇದ್ದಿದ್ದರೆ ತೊಂದರೆಯೇ ಇರುತ್ತಿರಲಿಲ್ಲ. ಹೇಗೋ ಮ್ಯಾನೇಜ್ ಆಗುತ್ತಿತ್ತು. ಆದರೆ ಪಟ್ಟಣದಲ್ಲಿ ಕಸದ ಶೇಖರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪಟ್ಟಣಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕೊಡುವ ಕಾಳಜಿ ಪುರಸಭೆಗಂತೂ ಇಲ್ಲ. ಪಟ್ಟಣದ ಮಾರುತಿ ರಸ್ತೆ, ಮುಖ್ಯರಸ್ತೆ ಮತ್ತು ತರಕಾರಿ ಮಾರುಕಟ್ಟೆಯಲ್ಲಿಯೇ ದಿನಾಲು ನಾಲ್ಕು ಟ್ರಿಪ್ ಕಸ ಸಂಗ್ರಹವಾಗುತ್ತಿದೆ.
ಅದನ್ನು ಸಾಗಿಸುವುದೇ ಸಾಹಸ ಎಂಬಂತಾಗಿದೆ. ಮುಖ್ಯ ರಸ್ತೆಯ ಕಸದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಇನ್ನು 23 ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ಜ್ವಲಂತವಾಗಿದೆ.
2 ಕಿ.ಮೀ. ದೂರದಲ್ಲಿರುವ ಕಸವಿಲೇವಾರಿ ಘಟಕ ಪಟ್ಟಣದಿಂದ 2.ಕಿ.ಮೀ. ದೂರವಿದೆ. ಟ್ರ್ಯಾಕ್ಟರ್‌ಗಳು ಅಲ್ಲಿಗೆ ಹೋಗುವ ಸಾಮರ್ಥ್ಯ ಕಳೆದುಕೊಂಡಿದ್ದು ಇದ್ದ ಬಿದ್ದ ಕಸವೆಲ್ಲ ಪಟ್ಟಣದಲ್ಲಿರುವ ತಗ್ಗುಗಳಿಗೆ ತುಂಬುವಂತಾಗಿದೆ, ಕಂಟೈನರ್ ಡಂಪರ್‌ಗಳಿದ್ದು ಸೂಕ್ತ ನಿರ್ವಹಣೆಯಿಲ್ಲದಂತಾಗಿದೆ.
ಕಾರ್ಮಿಕರ ಸಮಸ್ಯೆ: ಕಾಯಂ ಕಾರ್ಮಿಕರು, ಗುತ್ತಿಗೆ ಆಧಾರದ ಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು ಕೆಲವರು, ನೀರು ನಿರ್ವಹಣೆ ನೋಟಿಸ್ ನೀಡುವುದು, ಕಚೇರಿ ಕರ್ಮಚಾರಿ ಕೆಲಸಕ್ಕೆ  ಮೀಸಲಾಗಿದ್ದು ಕಸವಿಲೇವಾರಿ ಪಟ್ಟಣದ ಸ್ವಚ್ಛತೆಗೆ ಕಡಿಮೆ ಕಾರ್ಮಿಕರಿದ್ದುದರಿಂದ ಪಟ್ಟಣದಾದ್ಯಂತ ಸಮಸ್ಯೆ ಜಟಿಲವಾಗುತ್ತಲೇ ಇದೆ.
ಹೂಳುತುಂಬಿದ ಚರಂಡಿಗಳು: ಒಂದೆಡೆ ಅವೈಜ್ಞಾನಿಕ ಚರಂಡಿಗಳು, ಮತ್ತೊಂದೆಡೆ ಸಾರ್ವಜನಿಕರು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಚರಂಡಿಗಳಲ್ಲೆ ಬಿಸಾಡುವುದರಿಂದ ಚರಂಡಿಗಳೆಲ್ಲ ನೀರಿನಿಂದ ಬ್ಲಾಕ್ ಆಗಿ ಇಡೀ ವಾತಾವರಣ ಕೆಟ್ಟು ಹೋಗಿದೆ. ಮಳೆಗಾಲದ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಕಸದ ಸಮೇತ ರಸ್ತೆಗೆ ನೀರು ಬರುತ್ತದೆ.
ಕ್ರೀಯಾಶೀಲತೆ ಬೇಕು: ಪಟ್ಟಣ ಬೆಳೆದಿದೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲೇಬೇಕು ಎಂಬುವ ಇಚ್ಛಾಶಕ್ತಿ  ಆಡಳಿತ ನಡೆಸುವವರಿಗೆ ಬೇಕು.
ಸರ್ಕಾರದ ಗಮನಸೆಳೆದು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಇರುವ ಜನಸಂಖ್ಯೆಗನುಗುಣವಾಗಿ ಹೊಸ ಯೋಜನೆ ರೂಪಿಸಿ ಪಟ್ಟಣದ ಸ್ವಚ್ಛತೆಯ ಬಗ್ಗೆ ಗಮನ ನೀಡಬೇಕಾದದ್ದು ಅಗತ್ಯದ ಕರ್ತವ್ಯ. ಸಮಸ್ಯೆ ಹೀಗೆ ಮುಂದುವರಿದರೆ ಪಟ್ಟಣದ ಸ್ಥಿತಿ ಹದಗೆಟ್ಟು ಸಾಂಕ್ರಾಮಿಕ ರೋಗಗಳ ತಾಣವಾಗುವ ಸಾಧ್ಯತೆ ಹೆಚ್ಚಿದೆ.



ಯಾವುದೇ ವಾರ್ಡ್‌ಗಳಲ್ಲಿ ಸಂಚರಿಸಿದರೂ ಎಲ್ಲೆಂದರಲ್ಲಿ ಕಸದರಾಶಿ ಕಾಣಿಸುತ್ತದೆ. ಸಮಸ್ಯೆ ಬಗೆಹರಿಸಲು ಎಷ್ಟೇ ಮನವಿ ಮಾಡಿದರು ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಮಳೆಯ ಸಂದರ್ಭದಲ್ಲಿ ಕಸದರಾಶಿಯ ವ್ಯೆತಿರಿಕ್ತ ಪರಿಣಾಮ ಸಾರ್ವಜನಿಕರ ಮೇಲೆ ಬೀರಲಿದ್ದು ಪುರಸಭೆ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು.
- ಬಸವರಾಜ ಅರುಣಿ, ಶಹಾಪುರದ ನಿವಾಸಿ


ಕಸ ವಿಲೇವಾರಿ ತೊಂದರೆಗಳಿವೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆಯಲಾಗಿದೆ. ಬಡಾವಣೆಗಳಲ್ಲಿ ಓಡಾಡಲು 6 ಟ್ರ್ಯಾಲಿ ಆಟೋಗಳು, 3 ಹೊಸ ಟ್ರ್ಯಾಕ್ಟರ್‌ಗಳು, ಒಂದು ಟಿಪ್ಪರ ಖರೀದಿ ಸೇರಿದಂತೆ ಕನಿಷ್ಠ 25 ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿದೆ. ಹಂತ ಹಂತವಾಗಿ ಸಮಸ್ಯೆಗಳಿಗೆ ಸ್ಪಂದಿಸುವೆ.
- ರಾಯಪ್ಪ ಸಾಲಿಮನಿ ಅಧ್ಯಕ್ಷ, ಪುರಸಭೆ ಶಹಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments