ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

Rashmi Kasaragodu
Updated On : 26 Jun 2014, 11:59 am

ಯಾದಗಿರಿ: ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿ ಮೊದಲು ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ದಣಗೌಡ ಪೊಲೀಸ್ ಪಾಟೀಲ ಅಧಿಕಾರಿಗಳಿಗೆ ತಾಕಿತ್ತು ಮಾಡಿದರು.
ಅವರು ಜಿಲ್ಲಾ ಸಮಾಜ ಕಲ್ಯಾಣ ವತಿಯಿಂದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಇಲಾಖೆಯ ವಸತಿ ನಿಲಯ ಪಾಲಕರುಗಳ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಸತಿ ನಿಲಯದ ಅಧಿಕಾರಿಗಳೂ ಮಕ್ಕಳು ಆರೋಗ್ಯದ ಕಡೆಯೂ ಸಹ ಬಹಳಷ್ಟು ಗಮನ ಹರಿಸಬೇಕು. ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಸರಿ ಇರದ ಮಕ್ಕಳ ಆರೋಗ್ಯ ಹದಗೆಡುತ್ತಿದ್ದು, ಅದನ್ನು ಸುಧಾರಣೆ ಮಾಡಬೇಕಾದದ್ದು ಕರ್ತವ್ಯವಾಗಿದೆ ಎಂದು ಹೇಳಿದರು.
ವಸತಿ ನಿಲಯದ ವಾರ್ಡನ್‌ಗಳೂ ಬೆಳಿಗ್ಗೆ 6 ಘಂಟೆಯಿಂದ ರಾತ್ರಿ 8 ಗಂಟೆಯವರೆಗೂ ನಿಲಯಗಳಲ್ಲಿ ಕಾರ್ಯನಿರ್ವಹಿಸಬೇಕು. ಎಲ್ಲಿದರೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. 100ರಷ್ಟು ಸುಧಾರಣೆ ಆಗದಿದ್ದರೂ ಶೇ.50 ರಷ್ಟಾದರೂ ಸುಧಾರಣೆ ಆಗಬೇಕು. ತಾಲೂಕು ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿ ಅಲ್ಲಿನ ವಸತಿ ನಿಲಯ ಸುಧಾರಣೆಯ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಜಿ.ಪಂ ವಿರೋಧ ಪಕ್ಷದ ನಾಯಕ ಬಸವರಾಜ ಖಂಡ್ರೆ ಮಾತನಾಡಿ, ವಾರ್ಡನ್‌ಗಳು ಸಮಯ ಪ್ರಜ್ಞೆ ಮತ್ತು ಶಿಸ್ತು ಪಾಲನೆ ಮಾಡುವುದು ಅತಿಮುಖ್ಯ. ಎಲ್ಲರೂ ವ್ಯಕ್ತಿತ್ವ ಸುಧಾರಿಸುವ ನಿಟ್ಟಿನಲ್ಲಿ ಕೆಲಸಮಾಡಬೇಕು. ನಮ್ಮಲಿನ ವ್ಯಕಿತ್ವ ವಿಕಸನಗೊಳ್ಳಲು ಮಾರ್ಗದರ್ಶನ ಹಾಗೂ ಕಾರ್ಯಾಗಾರಗಳು ಅತ್ಯವಶ್ಯಕ ಎಂದು ಹೇಳಿದರು.
ಜಿಪಂ ಸದಸ್ಯ ಹನುಮೇಗೌಡ ಮರಕಲ್ ಮಾತನಾಡಿ, ವಸತಿ ನಿಲಯಗಳಿಗೆ ಇರುವ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು, ವಿದ್ಯಾರ್ಥಿಗಳಿಗೆ ಸರಿಯಾದ ಅನ್ನ, ಅಹಾರ ನೀಡುವುದಕ್ಕೆ ಪ್ರಾಮುಖ್ಯತೆ ಕೊಡಬೇಕು. ಹಾಸ್ಟೆಲ್‌ಗಳಿಗೆ ಬಂದ ಅನುದಾನದ ಸದ್ಬಳಕೆ ಆಗಬೇಕು. ವಾರ್ಡನ್‌ಗಳು ಮನೋಭಾವನೆ ಬೆಳೆಸಿಕೊಂಡು ವಿದ್ಯಾರ್ಥಿಗಳೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸಬೇಕು ಎಂದು ಸಲಹೆ ನೀಡಿದರು.
ಮನೋಶಾಸ್ತ್ರಜ್ಞ ಆರ್.ವಿ. ಪಾಟೀಲ್ ಮಾತನಾಡಿ, ಅನುಭವದಿಂದ ಪಡೆದಂತಹ ಜ್ಞಾನ ಅತಿಮುಖ್ಯ. ಋಣಾತ್ಮಕವಾದ ಬೌದ್ಧಿಕ ಶಕ್ತಿ ಅವಶ್ಯಕ. ಇಂದು ದೇಶದಲ್ಲಿ ಪ್ರಗತಿಗಿಂತಲೂ ಮನಶಾಂತಿ ಮುಖ್ಯ. ಆದ್ದರಿಂದ ಮಕ್ಕಳಲ್ಲಿ ಬಗ್ಗೆ ಹೆಚ್ಚು ಕಳಕಳಿಯಿಂದ ಅವರ ಆರೋಗ್ಯದ ಕಡೆ ಗಮನಕೊಟ್ಟು ವ್ಯಾಯಾಮ ಮತ್ತು ಒಳ್ಳೆಯ ಪೌಷ್ಠಿಕಾಂಶದ ಆಹಾರ ಒದಗಿಸಬೇಕು ಎಂದು ಹೇಳಿದರು.
ಮಲ್ಲಮ್ಮ ಬನಪ್ಪ, ರಾಮನಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಮುಕ್ಕಾ ಹಾಗೂ ಜಿಲ್ಲೆಯ ಎಲ್ಲ ವಸತಿನಿಲಯಗಳ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement