ನೂತನ ಡಿಸಿ ಅಧಿಕಾರ ಸ್ವೀಕಾರ
ಯಾದಗಿರಿ: ನೂತನ ಜಿಲ್ಲಾಧಿಕಾರಿಯಾಗಿ ಮನೋಜ್ ಜೈನ್ ಅಧಿಕಾರ ಸ್ವೀಕರಿಸಿದರು. ಪ್ರಭಾರಿ ಜಿಲ್ಲಾಧಿಕಾರಿ ಎಸ್.ಎ. ಜಿಲಾನಿಯವರು ನೂತನ ಜಿಲ್ಲಾಧಿಕಾರಿಗಳಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿ ಅಧಿಕಾರ ಹಸ್ತಾಂತರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ತಾನೇ ಅಧಿಕಾರ ಸ್ವೀಕರಿಸಿದ್ದು, ಜಿಲ್ಲೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಹಂತ ಹಂತವಾಗಿ ಜಿಲ್ಲೆ ಅಭಿವೃದ್ದಿ ಕಾರ್ಯಗಳು ಮಾಡಲಾಗುವುದು. ಬೀದರ್, ಬಳ್ಳಾರಿ, ಗುಲ್ಬರ್ಗ, ರಾಯಚೂರು, ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ, ಭೂಸ್ವಾಧೀನ ಇಲಾಖೆಯ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅನುಭವವನ್ನು ಮನೋಜ್ ಕುಮಾರ್ ಜೈನ್ ಅವರು ಹೊಂದಿದ್ದಾರೆ.