ಫಲವತ್ತಾದ ಜಮೀನುನೀಡಲು ಆಗ್ರಹಿಸಿ ಮನವಿ
ಯಾದಗಿರಿ: ಹಿರೇತುಮಕೂರು ಗ್ರಾಮದ ಪರಿಶಿಷ್ಟ ಜಾತಿಯ ಜಮೀನು ನೀಡುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಶರಣರೆಡ್ಡಿ ಹತ್ತಿಗೂಡುರ ನೇತೃತ್ವದಲ್ಲಿ ಹಿರೇತುಮಕೂರು ಗ್ರಾಮ ಫಲಾನುಭವಿಗಳು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಶಹಾಪುರ ತಾಲೂಕಿನ ಹಿರೇತುಮಕೂರು ಗ್ರಾಮದ ಪರಿಶಿಷ್ಟ ಜಾತಿ ಕುಟುಂಬಕ್ಕೆ ಹಿರೇತುಮಕೂರು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂಮಿಯನ್ನು ಸರ್ಕಾರ ದರ ನಿಗದಿ ರೂಪದಲ್ಲಿ 50 ಎಕರೆ ಜಮೀನನ್ನು ಖರೀದಿ ಮಾಡಿ 25 ಕುಟುಂಬಗಳ ಫಲಾನುಭಾವಿಗಳನ್ನು ಆಯ್ಕೆ ಮಾಡಿತ್ತು.
ನಂತರ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಪ್ರತಿಯೊಂದು ಕುಟುಂಬಕ್ಕೆ 2 ಎಕರೆಯಂತೆ ವಿತರಣೆ ಮಾಡಿತು. ಅಂದಿನ ಕೈ ಬರಹ ಪಾಣಿಯಲ್ಲಿ ಕುಟುಂಬದ ಫಲಾನುಭವಿ ಹೆಸರುಗಳು ನಮೂದಿಸಿಲಾಗಿದ್ದು, ಪಾಣಿಯಲ್ಲಿ ಮುದ್ರಣಗೊಳಿಸುವಾಗ ತಾಲೂಕಿನ ಉಪನೋಂದಣಾಧಿಕಾರಿಗಳ ಕಾರ್ಯಾಲಯ ಫಲಾನುಭವಿಗಳ ಹೆಸರುಗಳು ತಪ್ಪಾಗಿ ಮುದ್ರಣಗೊಂಡಿದೆ. ಇದರಂತೆ ಸುಮಾರು 25 ಫಲಾನುಭಾವಿಗಳು ಹೆಸರು ವ್ಯತ್ಯಾಸವಾಗಿವೆ.
ಅಂದಿನ ಸಂಬಂದಪಟ್ಟ ಅಧಿಕಾರಿಗಳು, ರಾಜಕೀಯ ಪಟ್ಟ ಭದ್ರ ಹಿತಶಕ್ತಿಗಳು ಕೈಚಳಕದಿಂದ ಈ ರೀತಿ ಫಲಾನುಭಾವಿಗಳ ಹೆಸರುಗಳು ಮುದ್ರಣಗೊಳಿಸಿದ್ದಾರೆ. ಅಂದಿನಿಂದ ಇಂದಿನ ವರೆಗೂ ಫಲವತ್ತಾದ ಭೂಮಿ ಹಾಗೂ ಫಲಾನುಭಾವಿಗಳ ಭೂಮಿ ಎಲ್ಲಿದೆ ಎಂಬುವುದೇ ಗೊತ್ತಿಲ ಎಂದು ಶರಣರೆಡ್ಡಿ ಆರೋಪಿಸಿದರು.
ಸದರಿ ವಿಷಯದ ಬಗ್ಗೆ ತಾವುಗಳು ಹೆಚ್ಚಿನ ಮುತುವರ್ಜಿ ವಹಿಸಿ, ಸ್ಥಳ ಪರಿಶೀಲನೆ ಮಾಡಿ ಕುಟುಂಬದ ಫಲಾನುಭವಿಗಳಿಗೆ ಭೂಮಿ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇವೆ. ಸದರಿ ವಿಷಯದ ಬಗ್ಗೆ ನಿರ್ಲಕ್ಷತೆ ವಹಿಸಿದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪರಶುರಾಮ ಚಲುವಾದಿ, ಹಿರೇಕುಮಕೂರು ಎಲ್ಲಪ್ಪ ಹೊಸ್ಮನಿ, ಮರೆಮ್ಮ ಹೊಸ್ಮನಿ, ಸಿದ್ದಲಿಂಗಮ್ಮ, ಯಲ್ಲಮ್ಮ, ನರಸಮ್ಮ, ತಿಮ್ಮಮ್ಮ ಗೌಡೂರು, ಭೀಮಮ್ಮ ಚಲುವಾದಿ, ಕಸ್ತೂರೆಮ್ಮ ಚಲುವಾದಿ, ಅನೀತಾ ಹೊಸ್ಮನಿ, ಬಾಗಮ್ಮ, ಮರೆಮ್ಮ ಇಟಗಿ ಮತ್ತಿತರರು ಇದ್ದರು.