ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೇಲು ಪ್ರಯಾಣ ದರ ಏರಿಕೆ ಖಂಡಿಸಿ ಪತ್ರಿಭಟನೆ

Rashmi Kasaragodu
Updated On : 27 Jun 2014, 11:51 am

ಯಾದಗಿರಿ: ರೈಲು ಪ್ರಯಾಣ ದರ ಏರಿಕೆ, ಸರಕು ಸಾಗಣೆ ದರ ಏರಿಕೆ, ಮಾಸಿಕ ಪಾಸ್‌ಗಳ ದರ ಏರಿಕೆಗಳು ಮತ್ತು ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಅವಕಾಶ ಮಾಡಿ ರೈಲು ಸೇವೆಯ ಖಾಸಗೀಕರಣ ಮಾಡಲು ಮುಂದಾಗಿದುವುದನ್ನು ಪ್ರತಿಭಟಿಸಿ ಪಕ್ಷದ ಯಾದಗಿರಿ ಸಂಘಟನಾ ಸಮಿತಿಯಿಂದ ಇಂದು ಯಾದಗಿರಿ ರೈಲು ನಿಲ್ದಾಣದ ಮುಂದೆ ಸಂಘಟಿಸಿದ್ದ ಬೃಹತ್ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಗಿತು.
ಮದ್ಯಮವರ್ಗ, ರೈತರು, ಕಾರ್ಮಿಕರಿಗಲ್ಲ ಮತ್ತು ಬಡಜನರಿಗಂತೂ ಅಲ್ಲವೇ ಅಲ್ಲ, ಅಂತಹ ಒಳ್ಳೆಯ ದಿನಗಳು ಟಾಟಾ, ಅಂಬಾನಿ, ಅದಾನಿಯಂತಹ ದೇಶೀಯ ಮತ್ತು ವಿದೇಶೀಯ ಬಂಡವಾಳಗಾರರಿಗೆ ಎನ್ನುವುದನ್ನು ಒಂದೇ ತಿಂಗಳಲ್ಲಿ ತೋರಿಸಿಕೊಂಡಿದೆ ಎಂದು ಸೋಷಲಿಷ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್)-ಎಸ್‌ಯುಸಿಐ(ಸಿ) ನ ಯಾದಗಿರಿ ಸಂಘಟನಾ ಸಮಿತಿಯ ಸಂಚಾಲಕರಾದ ಕೆ. ಸೋಮಶೇಖರ್ ಹೇಳಿದ್ದಾರೆ.
ಚುನಾವಣೆಯ ನಂತರ ಹಿಂದಿನ ಕಾಂಗ್ರೆಸ್ ಸರ್ಕಾರ ಹೋಯ್ತು, ಜನವಿರೋಧಿ ಬೆಲೆ ಏರಿಕೆ, ಖಾಸಗೀಕರಣ ನೀತಿ ಹೋಗಲಿಲ್ಲ. ಸರ್ಕಾರ ಬದಲಾಯಿಸಿದ ಮಾತ್ರಕ್ಕೆ ಜನವಿರೋಧಿ ನೀತಿಗಳು ಬದಲಾದವು ಎನ್ನುವುದಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಬೆಲೆ ಏರಿಕೆಯೇ ಸಾಕ್ಷಿಯಾಗಿವೆ.
ರೈಲ್ವೆಯನ್ನು ಖಾಸಗೀಕರಣಗೊಳಿಸಲು ಬಿರುಸಿನ ತಯ್ಯಾರಿಯನ್ನು ನಡೆಸಲಾಗುತ್ತಿದೆ. ರೈಲು ಸೇವೆ ಖಾಸಗೀಕರಣಗೊಂಡರೆ ಬಡಜನತೆಯ ಮತ್ತು ಮದ್ಯಮವರ್ಗದವರ ಪ್ರಯಾಣಕ್ಕೆ ಆಸರೆಯಾಗಿದ್ದ ರೈಲು ಸೇವೆ ಈ ಜನತೆಗೆ ಗಗನಕುಸುಮವಾಗುತ್ತದೆ. ಮಾತ್ರವಲ್ಲದೆ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಮತ್ತಿತರ ಜನತೆಗೆ ನೀಡಲಾಗುತ್ತಿದ್ದ ಎಲ್ಲ ರೀತಿಯ ನೆರವು, ರಿಯಾಯಿತಿಗಳು ನಿಂತುಹೋಗಲಿವೆ ಎಂದರು. ಪಕ್ಷದ ಯಾದಗಿರಿ ಸಂಘಟನಾ ಸಮಿತಿಯ ಸದಸ್ಯ ಗೌರಮ್ಮ ಸಿ.ಕೆ. ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸದಸ್ಯರಾದ ಜಮಾಲಸಾಬ್, ರಾಮು ಬಿ.ಎನ್, ಮರಿಲಿಂಗಪ್ಪ, ಬಸಮ್ಮ, ಮಲ್ಲಿಕಾರ್ಜುನ, ಮೋಹನ್, ರೂಮ್ಯಾ ನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement