ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂತೂ ವಾರದ ಬಳಿಕ ಕಸ ವಿಲೇವಾರಿ ಆಯ್ತು

Lingaraj Badiger
Updated On : 28 Jun 2014, 11:27 am

ಆಳಂದ: ಕಳೆದ ಒಂದು ವಾರದಿಂದ ಕಸವಿಲೆವಾರಿ ಮಾಡದೆ ಇದ್ದ ಪುರಸಭೆ ಕೊನೆಗೂ ಎಚ್ಚೆತುಕೊಂಡು ಶ್ರೀರಾಮ ಮಾರುಕಟ್ಟೆ ಆವರಣದಲ್ಲಿನ ಮತ್ತಿತರ ಕಡೆಯಿಂದ ಕಸ ವಿಲೆವಾರಿ ಮಾಡಿ ನಾಗರಿಕರಿಗೆ ಗಬ್ಬು ವಾಸನೆಯಿಂದ ಕೊಂಚ ನೆಮ್ಮದಿ ನೀಡಿದೆ.
ಅಲ್ಲದೆ, ಬೆಳ್ಳಂಬೆಳಗೆ ಸುಲ್ತಾನಪುರ ಬಡಾವಣೆ, ಖಾನ್‌ಬೌಡಿ ಪ್ರದೇಶ ಇನ್ನಿತರ ಕಡೆ ಚರಂಡಿ ಸ್ವಚ್ಚಗೊಳಿಸಿದ್ದು ಕಂಡು ಬಂದಿದೆ. ಶ್ರೀರಾಮ ಮಾರುಕಟ್ಟೆ ಪ್ರದೇಶದಲ್ಲಿ ಪ್ರತ್ಯೇಕ ಮೂರು ಕಡೆ ಕಸ ವಿಲೆವಾರಿ ಮಾಡುತ್ತಿದ್ದಂತೆ ಮತ್ತೆ ಮರುದಿನ ವ್ಯಾಪಾರಿಗಳು ಮತ್ತು ಬಾಗವಾನರು ಟ್ಯಾಕ್ಟರ್‌ನಿಂದ ರಾಶಿಗಟ್ಟಲೆ ಕೊಳೆತ ಮಾವು, ಬಾಳೆ ತರಕಾರಿ ಕಸ ಎಸೆವುದರಿಂದ ವಿಲೆವಾರಿಗೆ ವಿಳಂಬ ಮಾಡಿದರೆ ಮತ್ತೆ ಎಂದಿನಂತೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಇದಕ್ಕೆ ಪುರಸಭೆ ಮುಖ್ಯಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಮಾರುಕಟ್ಟೆಯ ಮೂರು ಕಡೆ ಕಸ ರಾಶಿಯಿಂದ ಯಾವ ದಿಕ್ಕಿನಲ್ಲೂ ನಿಂತುಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿತು. ಕಾರ್ಮಿಕರು ಪೂರ್ಣವಾಗಿ ಕಸವನ್ನು ಸ್ವಚ್ಚವಾಗಿ ವಿಲೆವಾರಿ ಮಾಡಿದ್ದಾರೆ.  ಇದೇ ವೇಳೆ ಪ್ರತಿಕ್ರಿಯಿಸಿದ್ದ ಕಾರ್ಮಿಕರು, ನಾವೇನು ಮಾಡಬೇಕು. ಟ್ಯ್ರಾಕ್ಟರ್‌ಗೆ ಡೀಸೆಲ್ ಇಲ್ಲದಕ್ಕೆ ನಿಲ್ಲಿಸಿಬಿಟ್ಟರೆ ಕಸ ಹೀಗೆ ತೆಗೆಯುವುದು ಎಂದು ನಾಗರಿಕರ ಮುಂದೆ ಬಹಿರಂಗವಾಗಿ ಅವರು ಪ್ರಶ್ನಿಸುತ್ತಿದ್ದರು.  ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ನಮಗೆ ಇದಕ್ಕೆ ಸಂಬಂದವಿಲ್ಲದಂತೆ ವರ್ತಿಸುತ್ತಿರುವುದು ಸರಿಯಲ್ಲ. ಮತ್ತೆ ಅದೇ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ತಳ್ಳಿ ಹಾಕಲಾಗದು ಎಂದು ನಾಗರಿಕ ಮುಖಂಡ ತಾನಾಜಿ ಟಿ. ಸೂರ್ಯವಂಶಿ ಕಳವಳ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಲೆಂಡಕಿ ನಾಲಾ, ಹನುಮಾನ ದೇವಸ್ಥಾನ ಬಸ್ ನಿಲ್ದಾಣ ಪ್ರದೇಶ ಇನ್ನಿತರ ಕಡೆಯ ಕಸದ ರಾಶಿಯನ್ನು ಸೋಮವಾರ ಕಾರ್ಮಿಕರು ತೆರವುಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement