60 ಸಸಿ ನೆಟ್ಟ ಎಐಡಿಎಸ್ಓ ಕಾರ್ಯಕರ್ತರು
ಶಹಾಬಾದ್: ನಗರದ ವಾರ್ಡ್ 19ರ ಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಐಡಿಎಸ್ಓ ಸಂಘಟನೆಯ ಸಂಸ್ಥಾನಪನಾ ದಿನಾಚರಣೆ ನಿಮಿತ್ಯ 60 ಸಸಿಗಳನ್ನು ನೆಟ್ಟು ಆಚರಿಸಲಾಯಿತು. ಅತಿಥಿಗಳಾಗಿ ಆಗಮಿಸಿದ ಎಸ್ಯುಸಿಐ (ಸಿ) ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ ಮಾತನಾಡಿ ಗಿಡಗಳನ್ನು ಬೆಳೆಸುವುದರಿಂದ ಉತ್ತಮವಾದ ಹವಾಮಾನ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿ ನಲವತ್ತೆಂಟು ವರ್ಷಗಳ ಹಿಂದೆಯೇ ಚಿಂತಕ ಶಿವದಾಸ್ ಘೋಷ್ರವರ ಪಶ್ಚಿಮ ಬಂಗಾಳದಲ್ಲಿ ಸಂಘಟನೆ ಸ್ಥಾಪಿಸಿ ಬಿತ್ತಿದ ಪರಿಣಾಮ ಇವತ್ತು ಎಲ್ಲೆಡೆ ಸಂಘಟನೆ ಬೆಳೆಯುತ್ತಿದೆ. ಅದನ್ನು ಒಂದು ದೊಡ್ಡ ಹೆಮ್ಮರವಾಗಿ ಬೆಳೆಸಿ ಉತ್ತಮವಾದ ಸಮಾಜವನ್ನು ನಿರ್ಮಿಸಬೇಕಾಗಿದೆ ಹಾಗೂ ನಮಗೆ ದಿನನಿತ್ಯ ಕಾಡುತ್ತಿರುವ ಸಮಸ್ಯೆಗಳಾದ ನಿರುದ್ಯೋಗ, ದೌರ್ಜನ್ಯ ತಡೆಯಲು ಇಂತಹ ನೈಜವಾದ ಕ್ರಾಂತಿಕಾರಿ ಸಂಘಟನೆ ಬೆಳಸಬೇಕು ಮತ್ತು ಬೆಂಬಲಿಸಬೇಕೆಂದು ಹೇಳಿದರು.