ಗುಲ್ಬರ್ಗದಲ್ಲಿಂದು ವಿಚಾರ ಸಂಕೀರ್ಣ
ಗುಲ್ಬರ್ಗ: ಭವಾನಿ ನಗರ ಮಕ್ತಾಪೂರದಲ್ಲಿ ಜೂ. 29ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಯೂತ್ ಎಂಪ್ಲಾಯ್ಮೆಂಟ್ ವಿಚಾರ ಸಂಕೀರ್ಣವನ್ನು ಭಾವಸಾರ ಕ್ಷತ್ರಿಯ ಸಮಾಜ ಹಮ್ಮಿಕೊಂಡಿದೆ ಎಂದು ಕಾರ್ಯದರ್ಶಿ ಅಂಬಾದಾಸ ಕೆ.ಹಿಬಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಲ್ಬರ್ಗ ನಗರದ ಕನ್ನಡ ಭವನದಲ್ಲಿ ಜೂ. 29ರ ಸಂಜೆ ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಣಯ ಕಾವ್ಯ ಸಂಭ್ರಮ ಹಮ್ಮಿಕೊಂಡಿದೆ. ಪ್ರೇಮ ಕವಿ ಕೃಷ್ಣಮೂರ್ತಿ ಹೆಬ್ಬಾರ್ ಹೊನ್ನಾವರ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ ಪ್ರಣಯ ಮುಕ್ತ ಕವಿ ಗವೀಶ ಹಿರೇಮಠ ಅಧ್ಯಕ್ಷತೆ ವಹಿಸುವರು. ಪ್ರೇಮ ಕವಿ ಅಧ್ಯಕ್ಷ ವಜ್ರಕುಮಾರ ಕಿವಡೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಉಪಸ್ಥಿತರಿರುವರು ಎಂದು ಗೌರವ ಕೊಶಾಧ್ಯಕ್ಷ ಡಾ.ರಾಜೇಂದ್ರ ಯರನಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ