ಗ್ರಾಮದೀಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಉದ್ಘಾಟನೆ
ಲಿಂಗಸ್ಗೂರು: ತಾಲೂಕಿನ ಗುಡದನಾಳ ಗ್ರಾಮದಲ್ಲಿ ಗ್ರಾಮದೀಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಾರಂಭೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ತಾಪಂ ಕಚೇರಿ ಲೆಕ್ಕ ಪರಿಶೋಧಕ ಮಹಾದೇವ ದೇಶಪಾಂಡೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಜನತೆ ಸಹಕಾರ ನೀಡುವ ಕುರಿತು ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿ ಸಿದ್ಧು ಪೂಜಾರಿ, ಸಂಸ್ಥೆಯ ಕಾರ್ಯಚಟುವಟಿಕೆ, ಉಪಯೋಗ, ಬಯಲು ಶೌಚಾಲಯ ತಡೆಗೆ ಸರ್ಕಾರ ಮತ್ತು ಸಂಸ್ಥೆಗಳ ಪಾತ್ರದ ಕುರಿತು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಗುಂಡಪ್ಪ ನಾಯಕ, ನಿಂಗಣ್ಣ ದೇವಿಕೇರಿ, ಅಯ್ಯಪ್ಪ ವಕೀಲರು, ಪರಶುರಾಮ ನಗನೂರ, ಭೀಮರಾಯ ಬಶೆಟ್ಟಿ, ಸಿದ್ಧನಗೌಡ ಪೊಲೀಸ್‌ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಕರೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ವಿವಿಧೆಡೆ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಖಾಲಿ ಇರುವ 7 ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜು.23 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗಸ್ಗೂರು ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಲಿಂಗಸ್ಗೂರು ತಾಲೂಕಿನ ಪೂಜಾರಿ ದೊಡ್ಡಿ ತಾಂಡಾ, ವಂದ್ಲಿಹೊಸೂರು, ಹಳೆಪೇಟೆ, ಮುದಗಲ್, ಕೆ.ಮರಿಯಮ್ಮನಹಳ್ಳಿ, ಮಸ್ಕಿ ತಾಂಡಾ, ಬೊಮ್ಮನಾಳ ತಾಂಡಾ, ಮಾರಲದಿನ್ನಿತಾಂಡಾ ಗ್ರಾಮಗಳ ಅಂಗನವಾಡಿ ಕಾರ್ಯಯಕರ್ತೆಯರ ಹುದ್ದೆಗಳು ಹಾಗೂ ಅಮರೇಶ್ವರನಗರ, ನಾಗರಾಳ, ಬುದ್ದಿನ್ನಿ, ಚಿಕ್ಕಜಾವೂರ, ಉಸ್ಕಿಹಾಳ, ಬೋಗಾಪೂರ, ಪೂಜಾರಿದೊಡ್ಡಿಗಳ ಅಂಗನವಾಡಿ ಸಹಾಯಕರ ಹುದ್ದೆಗಳು ಖಾಲಿ ಇವೆ ಎಂದು ಪ್ರಕಟಣೆ ತಿಳಿಸಿದೆ.