ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದ್ವಿತೀಯ ಪಿಯು ಪೂರಕ ಪರೀಕ್ಷೆ: ಸಕಲ ಸಿದ್ಧತೆಗೆ ಸೂಚನೆ

Rashmi Kasaragodu
Updated On : 29 Jun 2014, 1:30 am


ರಾಯಚೂರು: ಜಿಲ್ಲೆಯಲ್ಲಿ ಜು.3ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಿನ್ನೆಲೆಯಲ್ಲಿ ಈಚೆಗೆ ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಟ್ಟು 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 7,669 ಪರೀಕ್ಷಾರ್ಥಿಗಳು ಪೂರಕ ಪರೀಕ್ಷೆ ಎದುರಿಸಲಿದ್ದಾರೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದರು. 12 ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು 7 ವಾಹನಗಳ ಅವಶ್ಯಕತೆಯಿದ್ದು, ಅದಕ್ಕಾಗಿ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ವ್ಯವಸ್ಥೆ ಕೈಗೊಳ್ಳಲು ಸೂಚಿಸಲು ಸಭೆ ನಿರ್ಧರಿಸಿತು. ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣಾ ದಳಗಳನ್ನು ನೇಮಿಸುವುದು, ಪ್ರತಿ ಕೇಂದ್ರಕ್ಕೆ 4ರಿಂದ 6 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಟಿ. ಕಲ್ಲಯ್ಯ, ಮಾನವಿ ಪ್ರಾಚಾರ್ಯ ಪಿ.ಎನ್. ಕಟ್ಟಿ ಸೇರಿದಂತೆ ಎಲ್ಲ ತಹಸೀಲ್ದಾರರು ಅಧಿಕಾರಿಗಳು ಇದ್ದರು.


ಮೊಟ್ಟೆ ಕೋಳಿಗಳ ಗುಂಪು ಅನುಷ್ಠಾನಕ್ಕೆ ಅರ್ಜಿ ಆಹ್ವಾನ


ರಾಯಚೂರು: ಜಿಲ್ಲೆಯಲ್ಲಿ ಐದು ಘಟಕಗಳ ಒಂದು ಸಾವಿರ ಸಂಖ್ಯೆಯ ಮೊಟ್ಟೆ ಕೋಳಿ ಘಟಕಗಳಿರುವ ಗುಂಪುಗಳ ಅನುಷ್ಠಾನಗೊಳಿಸಲು ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯ ವೆಚ್ಚ 4.95 ಲಕ್ಷ ಆಗಿದ್ದು, ಬ್ಯಾಂಕಿನಿಂದ 3.95 ಲಕ್ಷ ಸಾಲ ಲಭ್ಯವಾಗಲಿದೆ. ಸಾಲ ಮಂಜೂರಾತಿ ಇರುವವರು ಅಥವಾ ಮಾಡಿಸಿಕೊಳ್ಳುವ ಫಲಾನುಭವಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.ಅರ್ಹ ಫಲಾನುಭವಿಗಳು ಒಂದು ವಾರದೊಳಗೆ ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರಿಂದ ಅರ್ಜಿ ಪಡೆದು ಮಾರ್ಗಸೂಚಿಯಂತೆ ಭರ್ತಿ ಮಾಡಿ ಸಲ್ಲಿಸಬೇಕು. ಮೊದಲು ಬಂದ ಅರ್ಜಿಗಳಿಗೆ ಆದ್ಯತೆ ಮೇರೆಗೆ ಫಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement