ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಣಯ ಕಾವ್ಯ ಸಂಭ್ರಮ ಇಂದು

Rashmi Kasaragodu
Updated On : 29 Jun 2014, 1:26 am

ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂ.29ರಂದು ಸಂಜೆ 5ಕ್ಕೆ ಕನ್ನಡ ಭವನದಲ್ಲಿ ಪ್ರಣಯ ಕಾವ್ಯ ಸಂಭ್ರಮ ಎಂಬ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಮತ್ತು ಬಿ.ಎಚ್. ನಿರಗುಡಿ ತಿಳಿಸಿದ್ದಾರೆ. ಉತ್ತರ ಕನ್ನಡ ಹಿರಿಯ ಪತ್ರಕರ್ತ ಮತ್ತು ಪ್ರೇಮಕವಿ ಕೃಷ್ಣಮೂರ್ತಿ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸುವರು. ಗುಲ್ಬರ್ಗದ ಮೊದಲ ಪ್ರಣಯ ಮುಕ್ತಕಗಳನ್ನು ಬರೆದ ಹಿರಿಯ ಸಾಹಿತಿ ಗವೀಶ ಹಿರೇಮಠ ಅಧ್ಯಕ್ಷತೆ ವಹಿಸುವರು. ಪ್ರೇಮಕವಿ ವಜ್ರಕುಮಾರ ಕಿವಡೆ ಮುಖ್ಯ ಅತಿಥಿಗಳಾಗಿರುವರು. ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಉಪಸ್ಥಿತರಿರುವರು. ಡಾ. ಕಾಶೀನಾಥ ಅಂಬಲಗೆ, ಶಂಕ್ರಯ್ಯ ಘಂಟಿ, ಸಂಧ್ಯಾ ಹೊನಗುಂಟಿಕರ್, ಪ್ರೊ. ಶಿವರಾಜ ಪಾಟೀಲ್, ಡಾ. ಅಕ್ಕಮಹಾದೇವಿ ಹಿರೇಮಠ, ಸುಬ್ರಾವ ಕುಲ್ಕರ್ಣಿ, ಡಾ. ಸೂರ್ಯಕಾಂತ ಸುಜ್ಯಾತ, ಶಿವಶಾಂತರೆಡ್ಡಿ, ಲಕ್ಷ್ಮೀ ಶಂಕರ ಜೋಶಿ, ನಾರಾಯಣ ಕುಲಕರ್ಣಿ ಸೇರಿದಂತೆ 45ಕ್ಕೂ ಹೆಚ್ಚು ಕವಿಗಳು ಕಾವ್ಯ ಸಂಭ್ರಮದಲ್ಲಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement