ರೋಗ ಭೀತಿಯಲ್ಲಿ ಶಾಲಾ ವಿಧ್ಯಾರ್ಥಿಗಳು
ಅಫಜಲ್ಪುರ: ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಬಟ್ಟೆ ಜೊತೆಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಆದರೆ ಬಿಸಿಯೂಟವನ್ನು ತಟ್ಟೆ ಬದಲು ದಿನಪತ್ರಿಕೆಗಳಲ್ಲಿ ನೀಡಿದರೆ ಳ ಆರೋಗ್ಯದ ಗತಿ ಏನು ಎಂದು ಜೈಕರವೇ ತಾಲೂಕಾಧ್ಯಕ್ಷ ಸುರೇಶ ಅವಟೆ ಪ್ರಶ್ನಿಸಿದರು. ತಾಲೂಕಿನ ಆನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಪೇಪರ್ನಲ್ಲಿ ನೀಡುತ್ತಿರುವುದನ್ನು ಖಂಡಿಸಿ ಮಾತನಾಡಿದ ಅವರು, ದಿನಪತ್ರಿಕೆಗಳಿಗೆ ಬಳಕೆಯಾಗುವ ರಾಸಾಯನಿಕಯುಕ್ತ ಬಣ್ಣ ಸೇವಿಸುವುದರಿಂದ ಕ್ಯಾನ್ಸರ್ನಂತ ಭಯಾನಕ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಕೂಡಲೇ ಶಾಲೆಯ ಮುಖ್ಯಗುರುಗಳು ಎಚ್ಚೆತ್ತು ತಟ್ಟೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಹಾಕದಿದ್ದರೆ ಮುಂದಾಗುವ ಅನಾಹುತಗಳಿಗೆ ಶಾಲೆಯ ಮುಖ್ಯಗುರು ಮತ್ತು ಶಾಲಾ ಸುಧಾರಣಾ ಸಮಿತಿ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.