ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧ ಯೋಜನೆಗೆ ವಿಕಲಚೇತನರ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Rashmi Kasaragodu
Updated On : 29 Jun 2014, 1:30 am

ರಾಯಚೂರು: ಜಿಲ್ಲೆಯ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜು.31ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಕಚೇರಿ ತಿಳಿಸಿದೆ. ವಿಕಲಚೇತನ ಸಾಧನೆ ಸಲಕರಣೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿ ವೇತನ, ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಶುಲ್ಕ ಮರುಪಾವತಿ, ವಿಕಲಚೇತನರ ವಿವಾಹ ಯೋಜನೆ,  ಶಿಶು ಪಾಲನಾ ಭತ್ಯೆ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು ಜು.31ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ವೆಬ್‌ಸೈಟ್ ವಿಳಾಸ- ಢಿಢಿಢಿ.ಢಿಜಟಜಿಛ್ಠಜ್ಟಜಿಜ್ಝಡಛಛಿಟಜಜ.್ಞಛ್ಠ.ಟ್ಝ್ಛಿ.್ಝಟಿಣ ರಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಕಚೇರಿ, ಸಿಯಾತಲಾಬ್ ರಾಯಚೂರು ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಸಮಸ್ಯೆಗಳತ್ತ ಗ್ರಾಪಂ ನಿರ್ಲಕ್ಷ್ಯ: ನಾಗರಿಕ ಹಿತರಕ್ಷಣಾ ಸಮಿತಿ


ಮಸ್ಕಿ: ಸ್ಥಳೀಯ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಎಂ.ಅಮರೇಶ ರಾಜಿನಾಮೆ ಸಲ್ಲಿಸಿ ಎರಡು ವಾರ ಗತಿಸಿದರೂ ನೂತನ ಅಧ್ಯಕ್ಷರ ಆಯ್ಕೆಗೆ ಜಿಲ್ಲಾಡಳಿತ ದಿನಾಂಕ ನಿಗದಿಪಡಿಸಿಲ್ಲ. ಅದರಿಂದಾಗಿ ಪಟ್ಟಣದಲ್ಲಿ ಹತ್ತಾರು ಸಮಸ್ಯೆಗಳು ಉಂಟಾಗಿವೆ. ಗ್ರಾಪಂ ಪಿಡಿಒ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆಂದು ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಆರೋಪಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಮಿತಿಯ ಸದಸ್ಯ ಕೃಷ್ಣಾ ಚಿಗರಿ, ಗ್ರಾಮದ ನೀರಿನ ಹಾಗೂ ಚರಂಡಿಯ ಇನ್ನಿತರ ಸಮಸ್ಯೆ ಹೆಚ್ಚಿದ್ದು, ನಿವಾರಿಸುವಲ್ಲಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಭವಾನಿ ಅವರು ವಿಫಲರಾಗಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಅಭಿವೃದ್ಧಿ ಅಧಿಕಾರಿಗೆ ಗ್ರಾಮದ ಸಮಸ್ಯೆಗಳ ಬಗ್ಗೆ ಮಾಹಿತಿಯಿಲ್ಲ ಎಂದು ಟೀಕಿಸಿದ್ದಾರೆ. ಕೂಡಲೇ ಗ್ರಾಪಂನಿಂದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸದಿದ್ದಲ್ಲಿ ಗ್ರಾಪಂ ಎದುರು ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement