ಸಮರ್ಪಕ ಬಸ್ಗೆ ಸರಸ್ವತಿ ಮಹಿಳಾ ಸಂಘ ಆಗ್ರಹ
ಆಳಂದ: ಗ್ರಾಮೀಣ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ಬಸ್ ಸೌಲಭ್ಯದವಿಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ. ತಾಲೂಕಿನ ಚಿಂಚೋಳಿ(ಬಿ) ಗ್ರಾಮದಲ್ಲಿ ನಿಗದಿತ ಸಮಯಕ್ಕೆ ಬಸ್ ಸಂಚರಿಸುತ್ತಿಲ್ಲ. ಶೀಘ್ರವೇ ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಗ್ರಾಮದ ಸರಸ್ವತಿ ಮಹಿಳಾ ಸಂಘದ ಮುಖಂಡರು ಸಾರಿಗೆ ಸಂಸ್ಥೆಯ ಘಟಕದ ವ್ಯವಸ್ಥಾಪಕರಿಗೆ ಗಡವು ನೀಡಿದ್ದಾರೆ. ಹಿಂದೆ ಹಲವು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿರುವ ಅವರು, ಆಳಂದ ಬಸ್ ನಿಲ್ದಾಣದಿಂದ ಬೆ.8.30ಕ್ಕೆ ಹೊರಟು 9.30ಕ್ಕೆ ತಲುಪಬೇಕಾದ ಬಸ್ 1.30 ಗಂಟೆ ತಡವಾಗಿ ಆಗಮಿಸುತ್ತಿದೆ. ಹೀಗಾಗಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿಮೀ ನಡೆಯಬೇಕಾಗಿದೆ. ಕೂಡಲೇ ಸಮಸ್ಯೆ ಪರಿಹರಿಸದಿದ್ರೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಗ್ರಾಮದ ಸರಸ್ವರತಿ ಮಹಿಳಾ ಮಂಡಳದ ಅಧ್ಯಕ್ಷೆ ಗಿರಿಜಾ ಖಂಡಾಳಿ, ಸುಶಿಲಾಬಾಯಿ ಮತ್ತಿತರರು ಎಚ್ಚರಿಸಿದ್ದಾರೆ.