ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಲಾಕೃತಿಗಳ ಆಹ್ವಾನ

Rashmi Kasaragodu
Updated On : 3 Mar 2014, 11:07 am

ಗುಲ್ಬರ್ಗ: ನಗರದ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ರಾಜ್ಯಮಟ್ಟದ ಪ್ರಥಮ ವಾರ್ಷಿಕ ಕಲಾಪ್ರದರ್ಶನಕ್ಕೆ ಚಿತ್ರಕಲಾಕೃತಿಗಳನ್ನು ಅಹ್ವಾನಿಸಿಲಾಗಿದೆ. ಈ ಸ್ಪರ್ಧೆಗೆ ಜಲವರ್ಣ, ತೈಲವರ್ಣ, ರೇಖಾಚಿತ್ರ, ಮಿಶ್ರ ಮಾಧ್ಯಮ, ಛಾಯಾಚಿತ್ರ ಮತ್ತು ಗ್ರಾಫಿಕ್ಸ್ ಮಾಧ್ಯಮದ ಮೂಲ ಕಲಾಕೃತಿಗಳು/ ಛಾಯಾಚಿತ್ರಗಳನ್ನು ಮಾ. 20ರೊಳಗೆ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಗೆ ಕಳುಹಿಸಬೇಕು ಎಂದು ಅಧ್ಯಕ್ಷ ಡಾ. ಪರಶುರಾಮ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901360105 ಸಂಪರ್ಕಿಸಬಹುದು.
ವಿರೂಪಾಕ್ಷಪ್ಪ ಗಡ್ಡದ್ ನೇಮಕ
ಗುಲ್ಬರ್ಗ: ಬಳ್ಳಾರಿಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ನೂತನ ನಿರ್ದೇಶಕರಾಗಿ ವಿರೂಪಾಕ್ಷಪ್ಪ ಎಂ. ಗಡ್ಡದ್  ಇವಣಿ ಇವರನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ನೇಮಕ ಮಾಡಿದ್ದಾರೆ. ಎರಡು ವರ್ಷಗಳ ಅವಧಿಗಾಗಿ ಗಡ್ಡದ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಹಣಕಾಸು ಇಲಾಖೆ ಉಪ ಕಾರ್ಯದರ್ಶಿ ಎ. ಕೆ. ದೋರೆಗಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement