ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಬಿಆರ್‌ಪಿ ಭೇಟಿ

Rashmi Kasaragodu
Updated On : 3 Mar 2014, 10:58 am

ಆಳಂದ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿನ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಬಿ.ಆರ್. ಪಾಟೀಲ ಈಚೆಗೆ ಭೇಟಿ ನೀಡಿ ಕೆಲ ಮಾಹಿತಿಯನ್ನು ಪಡೆದರು.
ತಾಲೂಕಿನಲ್ಲಿ ಮಳೆ ಕಡಿಮೆಯಾದರೂ, ತೊಗರಿ ಉತ್ತಮ ಇಳುವರಿ ಬಂದಿದೆ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಎಲ್ಲಾ ರೈತರಿಗೂ ದೊರೆಯುವಂತಾಗಬೇಕು. ಖರೀದಿ ಕಾರ್ಯ ವಿಳಂಬವಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವಂತೆ ತಾಕೀತು ಮಾಡಿದರು.
ಅಧಿಕಾರಿ ಬಾಬಾ ಹುಸೇನ, ಗೌಸುದ್ದಿನ್ ಮಾಹಿತಿ ನೀಡಿ, ತಾಲೂಕಿನಲ್ಲಿ ಜ. 8ರಿಂದ ತೊಗರಿ ಖರೀದಿ ಕಾರ್ಯ ನಡೆದಿದೆ. 4 ಸಾವಿರ ರೈತರಲ್ಲಿ 620 ರೈತರಿಂದ 10 ಸಾವಿರ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಇನ್ನೂ 60 ಸಾವಿರ ಕ್ವಿಂಟಾಲ್ ತೊಗರಿ ಖರೀದಿಸಲು 3 ತಿಂಗಳು ಕಾಲಾವಕಾಶ ಬೇಕು ಎಂದು ಮಾಹಿತಿ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮೋಹನಗೌಡ ಪಾಟೀಲ, ಮುಖಂಡ ಮಲ್ಲಿನಾಥ ಪರೇಣಿ, ಬಿ.ಕೆ. ಪಾಟೀಲ, ಗುರುಶರಣ ಪಾಟೀಲ, ಭೀಮಾಶಂಕರ ತಳಕೇರಿ, ಶ್ರೀಶೈಲ ಚಿಚಕೋಟಿ, ಶ್ರೀಶೈಲ ಕೊಟ್ಟರ್ಕಿ, ಶರಣಬಸಪ್ಪಾ ವಾಘೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement