ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಿನಗೂಲಿ ನೌಕರರಿಗೆ ಸೇವಾಭದ್ರತೆ ಪ್ರಕ್ರಿಯೆ ಪೂರ್ಣ: ಹಿರೇಮಠ

Rashmi Kasaragodu
Updated On : 3 Mar 2014, 11:07 am

ಗುಲ್ಬರ್ಗ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದಿನಗೂಲಿ ಎಂದು ಸೇವೆಯಲ್ಲಿದ್ದ 23,500 ನೌಕರರಿಗೆ ಸೇವಾ ಭದ್ರತೆ ನೀಡುವ ಹಾಗೂ ವಿವಿಧ ಸವಲತ್ತು ಒದಗಿಸುವ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಿದೆ.
ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿಧೇಯಕ ಅನುಸಾರ ಸೇವಾ ಭದ್ರತೆ, ಇತರೆ ಸವಲತ್ತುಗಳನ್ನು ನೌಕರರಿಗೆ ನೀಡುವ ಪ್ರಕ್ರಿಯೆಯು ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅನುಮೋದನೆಯೊಂದಿಗೆ ಸಿದ್ಧವಾಗಿದ್ದು ಇದರಿಂದಾಗಿ ಶೀಘ್ರವೇ ಫಲಾನುಭವಿ ದಿನಗೂಲಿಗಳ ಯಾದಿಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ದಿನಗೂಲಿ ನೌಕರರ ಹೋರಾಟ ಸಮಿತಿಯ ಮುಖಂಡ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿರುವ ಹಿರೇಮಠ, 2013ರ ಫೆಬ್ರವರಿಯಿಂದಲೇ ದಿನಗೂಲಿಗಳಿಗೆ ಸೇವಾ ಭದ್ರತೆ ಹಾಗೂ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸವಲತ್ತುಗಳು ದೊರಕಲಿವೆ.
ಇದರಿಂದಾಗಿ ದಿನಗೂಲಿಗಳು ಈಗಿನ 6 ರಿಂದ 7 ಸಾವಿರ ಸಂಬಳದ ಬದಲಿಗೆ 16ರಿಂದ 20 ಸಾವಿರ ಸಂಬಳ ಪಡೆಯಲಿದ್ದಾರೆ. ನಿವೃತ್ತಿ ನಂತರ 12 ತಿಂಗಳ ವೇತನದ ಗ್ರ್ಯಾಚ್ಯುಟಿ, ಪಿಂಚಣಿಗೂ ಇವರು ಅರ್ಹರು. ಅರಣ್ಯ ಇಲಾಖೆಯಲ್ಲೇ 4,800ರಷ್ಟು ದಿನಗೂಲಿಗಳಿದ್ದಾರೆ ಎಂದಿದ್ದಾರೆ.
ದಿನಗೂಲಿಗಳಿಗೆ ಸೇವಾ ಭದ್ರತೆ ನೀಡಿ, ಸರ್ಕಾರಿ ನೌಕರರಿಗೆ ನೀಡುವಂತಹ ಸವಲತ್ತುಗಳಿಗಾಗಿನ ಸುದೀರ್ಘ ಹೋರಾಟ ಗುಲ್ಬರ್ಗದಿದಂಲೇ ಶುರುವಾಗಿ ರಾಜ್ಯಾದ್ಯಂತ ವ್ಯಾಪಿಸಿತ್ತು. ಚಂದ್ರಶೇಖರ ಹಿರೇಮಠ ಈ ಹೋರಾಟದ ಮುಂಚೂಣಿಯಲ್ಲಿದ್ದು ಕಳೆದೊಂದು ದಶಕದಿಂದ ಸರ್ಕಾರದ ವಿವಿಧ ಹಂತದಲ್ಲಿ ಗಮನ ಸೆಳೆಯುನವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿಯೇ ಈ ಹೋರಾಟ ಇಂದು ಯಶ ಕಂಡಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement