ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧರ್ಮದ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

Rashmi Kasaragodu
Updated On : 3 Mar 2014, 11:06 am

ಹಿರೇವಡಗೇರಾ: ಧರ್ಮದಲ್ಲಿರುವ ಉತ್ತಮ ಅಂಶಗಳನ್ನು ತೆಗೆದುಕೊಂಡು ಶಾಂತಿ, ಸಹೋದತ್ವದಿಂದ ಬಾಳಿದಾಗ ಮಾತ್ರ ಅನೇಕತೆಯಲ್ಲಿ ಏಕತೆಯನ್ನು ಕಾಣಬಹುದು ಎಂದು ಮಾಜಿ ಸಚಿವರು ಹಾಗೂ ಯಾದಗಿರಿ ಮತಕ್ಷೇತ್ರದ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಹೇಳಿದರು.
ಇಲ್ಲಿಗೆ ಸಮೀಪವಿರುವ ಹಬಿಸಿಹಾಳ ಗ್ರಾಮದಲ್ಲಿ ಜನಾಬ್ ಚಾಂದ್ ಪಟೇಲ್ ರಿಲಿಜಿಯಸ್ ಟ್ರಸ್ಟ್ ಆಯೋಜಿಸಿದ್ದ ಎಂಬಸಿ ಗ್ರೂಪ್, ಬೆಂಗಳೂರು ಇವರ ಅನುದಾನದಲ್ಲಿ ನಿರ್ಮಿಸಿದ ಜಾಮಿಯಾ ಮಜ್ದೀದ್-ಏ-ಬಿಲಾಲ್ ಇದರ ಉದ್ಘಾಟನೆ ಮತ್ತು ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಅನೇಕತೆಯಲ್ಲಿ ಏಕತೆ: ಪ್ರೀತಿ, ಪ್ರೇಮ, ಸಹನೆ ಎಂಬ ಈ ಮೂರು ಅಮೂಲ್ಯ ರತ್ನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನೇಕತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ ಎಂದರು. ಮಸೀದಿಗೆ ಸುಮಾರು ರು. 50 ಲಕ್ಷವನ್ನು ದೇಣಿಗೆಯಾಗಿ ಕೊಟ್ಟ ಎಂಬಸಿ ಗ್ರೂಪ್‌ನ ಅಧ್ಯಕ್ಷರ ಕಾರ್ಯ ಶ್ಲಾಘನೀಯ. ಇಂತಹವರಿಗೆ ನಾವೆಲ್ಲರೂ ಸ್ಫೂರ್ತಿಯನ್ನು ಕೊಟ್ಟರೆ ಇನ್ನೂ ಹೆಚ್ಚಿನ ಸಮಾಜ ಕಾರ್ಯಗಳನ್ನು  ನಿರೀಕ್ಷಿಸಬಹುದು ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಂಬಸಿ ಗ್ರೂಪ್ ಅಧ್ಯಕ್ಷ ಜಿತೇಂದ್ರ ವಿರವಾನಿ, ಸಬ್ಕಾ ಮಾಲೀಕ್ ಏಕ್ ತತ್ವದಡಿ ನಮ್ಮ ಗ್ರೂಪ್‌ನಿಂದ ದೇವಾಲಯಗಳಿಗೆ, ಚರ್ಚ್‌ಗಳಿಗೆ ಹಾಗೂ ಮಜ್ದಿದಗಳಿಗೆ ಹಣವನ್ನು ಕೊಡುತ್ತೇವೆ .ನಮ್ಮ ದೇಶದಲ್ಲಿ ಇದಕ್ಕಿಂತ ಸುಂದರವಾದ ದೇವ ಮಂದಿರಗಳನ್ನು ನಿಮರ್‌ಸುತ್ತಾರೆ . ಆದರೆ ಅದರ ಸರಿಯಾದ ನಿರ್ವಹಣೆಯನ್ನು ಮಾಡುವುದಿಲ್ಲ ಎಂದು ವಿಷಾದಿಸಿದರು.
ಸಾಮೂಹಿಕ ವಿವಾಹ: ಸಮಾರಂಭದಲ್ಲಿ ಜವಾಹರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎಸಿ ಕಾಡೂರ, ದೆಹಲಿಯಿಂದ ಬಂದಿದ್ದ ಮೌಲಿ ಮಹ್ಮದ್ ಮುಸ್ತಿಕಿನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕರಾದ ಡಾ. ವೀರಬಸವಂತರಡ್ಡಿ ಮುದ್ನಾಳ, ಎಂಬಸಿ ಗ್ರೂಪ್‌ನ ಕರಣ ವೀರವಾನಿ, ರಾಜೇಶ ಬಜಾಜ್, ಬಾಪೂಜಿ ವಿದ್ಯಾಸಂಸ್ಥೆ ದಾವಣಗೆರೆಯ ಎಸ್‌ಎಸ್ ಗಣೇಶ, ಬಿಎಸ್ ನಾರಾಯಣ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ಜಿಪಂ ಸದಸ್ಯರಾದ ದೇವರಾಜ ನಾಯಕ, ಬೆಂಡೆಬೆಂಬಳಿ ಗ್ರಾಪಂ ಅಧ್ಯಕ್ಷ ಸಂಗಪ್ಪಗೌಡ ಹಳೆಮನಿ, ಪುರಸಭೆ ಮಾಜಿ ಅಧ್ಯಕ್ಷ ಅಜೀಜ್ ಶೇನಾ, ಮೌಲಾನಾ ಇಲಯಾಜ್ ಖಾದೀರ್ ಬಸವರಾಜ ಸೊನ್ನದ, ಸದಾಶಿವಪ್ಪಗೌಡ, ಬಾಷುಮಿಯ್ಯ ನಾಯಿಕೋಡಿ, ಮಹೆಬೂಬ್ ಅಲಿಸಾಬ, ಅಬ್ದುಲ್ ಮಜೀದ್, ಮಹ್ಮದ್ ಮುಸ್ತಫಾ, ಮಹ್ಮದ್ ಸಿರಾಜುದ್ದೀನ್, ಕಾಜಾಹುಸೇನಿ, ಇಮಾಂ ಪಟೇಲ, ಅಕ್ಬರ್ ಅಲಿ ದೊಡ್ಡಮನೆ ಹಾಗೂ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಝಾಕಿರ್ ಹುಸೇನ್ ನಿರೂಪಿಸಿ, ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement