ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಎಸ್ಟಿಗೆ ಕೋಲಿ ಸಮಾಜ; ಶೀಘ್ರ ಮನ್ನಣೆ'

Mainashree
Updated On : 4 Mar 2014, 10:48 am

ಕ.ಪ್ರ. ವಾರ್ತೆ  ಚಿಂಚೋಳಿ  ಮಾ.3
ರಾಜ್ಯದಲ್ಲಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅತೀ ಶೀಘ್ರದಲ್ಲಿ ಅದಕ್ಕೆ ಮನ್ನಣೆ ಸಿಗಲಿದೆ ಎಂದು ಬೀದರ್ ಸಂಸದ ಧರಂಸಿಂಗ್ ಭರವಸೆ ನೀಡಿದರು.
ತಾಲೂಕಿನ ಐನೋಳಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಹಾಗೂ  ಸರ್ಕಾರಿ ಪ್ರಾಥಮಿಕ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾನಾಗುಂದಿಯಲ್ಲಿ ನಡೆದ ಕೋಲಿ ಸಮಾವೇಶದಿಂದಾಗಿ ಹೋರಾಟದಲ್ಲಿ ಶಕ್ತಿ ತುಂಬಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ರಾಜ್ಯ ಸರ್ಕಾರದಿಂದ ಈಗಾಗಲೇ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಿದ್ದು. ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಬೇಡಿಕೆ ಈಡೇರಲಿದೆ: ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರ ಸಮರ್ಥ ನಾಯಕತ್ವದಲ್ಲಿ ಕೋಲಿ ಸಮಾಜದ ಬಹುದಿನಗಳ ಬೇಡಿಕೆ ಈಡೇರಲಿದೆ. ಯಾವದೇ ವ್ಯಕ್ತಿಗತ ಹೋರಾಟಕ್ಕೆ ಫಲ ಸಿಗುವುದಿಲ್ಲ. ಶೋಷಣೆಗೆ ಒಳಗಾಗಿರುವ ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿ ದೇಶದಲ್ಲಿ ಬಡ ಜನತೆಗೆ ಸಮನಾದ ಹಕ್ಕುಗಳನ್ನು ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಡಾ. ಉಮೇಶ ಜಾಧವ್, ಜಿಲ್ಲಾ ಕೋಲಿ ಸಮಾಜ ಅಧ್ಯಕ್ಷ ರವಿರಾಜ ಕೊರವಿ, ಡಾ. ಮಲ್ಲಿಕಾರ್ಜುನ ಗಾಜರೆ, ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ ಮಾತನಾಡಿದರು. ನರಸಿಂಹಲು ಸವಾರಿ, ಎಪಿಎಂಸಿ ನಿರ್ದೇಶಕ ಅಜೀತ ಪಾಟೀಲ್, ಅನಿಲ್ ಜಮಾದಾರ, ಜರಣಪ್ಪ ಚಿಂಚೋಳಿ, ಸಿ.ಬಿ. ಪಾಟೀಲ್, ಆರ್.ಎನ್. ನಾಟೀಕಾರ, ಜಗನ್ನಾಥ ಕಟ್ಟಿ, ಶಿವಕುಮಾರ ಕೊಳ್ಳುರ, ಲಕ್ಷ್ಮಣ ಆವಂಟಿ, ಅಬ್ದುಲ್ ಬಾಸೀತ, ಶ್ರೀಮಂತ ಕಟ್ಟಿಮನಿ, ಬಿಇಒ ಹಣಮಂತರಾವ ನಾಟೀಕಾರ, ರಾಮಣ್ಣ ಸುಂಕಾ, ಅರ್ಜುನ ಬೋಯಿನ್, ರಮೇಶ ಸಂಕಟಿ ಇತರರು ಇದ್ದರು. ಶಿವಕುಮಾರ ತಳವಾರ ಸ್ವಾಗತಿಸಿದರು. ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಖ ಭಕ್ತಿಯಾರ ನಿರೂಪಿಸಿದರು. ನಾಗೇಂದ್ರ ಬೊಕ್ಕಲ್ ವಂದಿಸಿದರು.
ನೀಡಿದ ಭರವಸೆ ಈಡೇರಿಸಿದ್ದೇವೆ: ಧರಂಸಿಂಗ್
ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರುಗೊಳಿಸಿ ಪೂರ್ಣಗೊಳಿಸಲಾಗಿದೆ ಎಂದು ಬೀದರ್ ಸಂಸದ ಎನ್.ಧರ್ಮಸಿಂಗ್ ಹೇಳಿದರು.
ತಾಲೂಕಿನ ಐನೋಳಿ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ತಾಲೂಕಿನ ವಿವಿಧ ಇಲಾಖೆಗಳ 100 ಕೋಟಿಯ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೀದರ್ ಸಂಸದರಾಗಿ ಆಯ್ಕೆಗೊಂಡ ನಂತರ ಕಳೆದ 5 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಜನರ ನಿರೀಕ್ಷೆಯಂತೆ ಬೀದರ್ ಲೋಕಸಭಾ ಮತಕ್ಷೇತ್ರದಲ್ಲಿ ಅಭಿವೃದ್ಧಿಗಳು ನಡೆದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಡಾ. ಉಮೇಶ ಜಾಧವ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಅಭಿವೃದ್ಧಿಗೆ ಜನರ ಸಹಕಾರ ತುಂಬಾ ಅಗತ್ಯವಾಗಿದೆ ಎಂದರು. ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಅಲ್ಲಂಪ್ರಭು ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷೆ ಜಯಶ್ರೀ ಸಜ್ಜನಶೆಟ್ಟಿ, ಸಿ.ಬಿ.ಪಾಟೀಲ್ ಓಕಳಿ, ತಾಪಂ ಸದಸ್ಯರಾದ ಮಲ್ಲಮ್ಮ ಪಾಟೀಲ್, ಮಾಣಿಕಮ್ಮ ಗೋಸುಲ್, ಅಶೋಕ ಮಹೇಂದ್ರಕರ, ಎಇಇ ರಾಜಶೇಖರ ಗಾರಂಪಳ್ಳಿ ಸೇರಿದಂತೆ ಇನ್ನೀತರರು ವೇದಿಕೆಯಲ್ಲಿದ್ದರು. ವಿಜಯಕುಮಾರ ರೊಟ್ಟಿ ಸ್ವಾಗತಿಸಿದರು. ಇಬ್ರಾಹಿಂ ದೇಗಲಮಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement