ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಪಘಾತ: 2 ಸಾವು, 7 ಮಂದಿಗೆ ಗಾಯ

Mainashree
Updated On : 5 Mar 2014, 10:53 am

ವಾಡಿ/ಶಹಾಬಾದ್: ಪಟ್ಟಣದಿಂದ ನಾಲವಾರದತ್ತ ಹೋಗುತ್ತಿದ್ದ ಕ್ರೂಸರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 7 ಜನ ಗಾಯಗೊಂಡಿದ್ದಾರೆ. 2 ಮಕ್ಕಳು ಸೇರಿದಂತೆ ಮೂರು ಜನರ ಸ್ಥಿತಿ ಚಿಂತಾಜನಕವಾಗಿದೆ. ನಾಲವಾರ ಸ್ಟೇಷನ್ ಬಳಿಯ ಕುಂಬಾರಹಳ್ಳಿ ಬಳಿ ನಡೆದ ಘಟನೆಯಲ್ಲಿ ಕರದಳ್ಳಿ ಗ್ರಾಮದ ದ್ಯಾವಮ್ಮ ಬಸಪ್ಪ ತೆಲಗಾರ(50), ಹಲಕರ್ಟಿ ಗ್ರಾಮದ ಜರೀನಾಬೇಗಂ ಬಬಲು(55) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಕ್ಕಳಾದ ಲಕ್ಷ್ಮೀ ಹಲಕರ್ಟಿ(2), ನಾಗರಾಜ ಸೋಮಣ್ಣ ಕುಂಬಾರಹಳ್ಳಿ(10), ವಿಜಯಲಕ್ಷ್ಮೀ ವಿರೇಶ ಹಲಕರ್ಟಿ(36) ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಲಕ್ಷ್ಮಣ ದಾಸರವಾಡಿ, ರಾಧಾ ಹಿಟ್ಟಿನ, ಸಂತೋಷ ಹಿಟ್ಟಿನ, ಮಲ್ಲಪ್ಪ ಹಲಕರ್ಟಿ ಎಂಬುವವರಿಗೆ ಗಾಯವಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ನಟರಾಜ ಲಾಡೆ ಭೇಟಿ ನೀಡಿದ್ದು, ಗಾಯಗೊಂಡವರಿಗೆ ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಗುಲ್ಬರ್ಗಕ್ಕೆ ಸಾಗಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement