ಪ್ರತಿ ಘನ ಮೀಟರ್ ಮರಳಿಗೆ ರು. 567 ನಿಗದಿ
ಯಾದಗಿರಿ: ಮರಳು ಗಣಿಗಾರಿಕೆ ನಿಯಮಗಳ ತಿದ್ದುಪಡಿ ಅನ್ವಯ ಯಾದಗಿರಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮರಳು ಮಾರಾಟ ದರ ಪ್ರತಿ ಘನ ಮೀಟರ್‌ಗೆ ರು. 567ನಂತೆ ದರ ನಿಗದಿಪಡಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಮರಳು ನಿಗಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ಈ ಮೊದಲು ಪ್ರತಿ ಘನಮೀಟರ್ ಮರಳಿಗೆ ರು. 268 ನಿಗದಿಪಡಿಸಲಾಗಿತ್ತು. ಆದರೆ ಈಗ ನೂತನ ಮರಳು ಗಣಿಗಾರಿಕೆ ನಿಯಮಗಳ ತಿದ್ದುಪಡಿ ಅನ್ವಯ ಪ್ರತಿ ಘನ ಮೀಟರ್‌ಗೆ 567 ದರವನ್ನು ಪರಿಷ್ಕರಿಸಿ ನಿಗದಿಪಡಿಸಿದ್ದು, ಸಂಬಂಧಪಟ್ಟ ಇಲಾಖೆಯು ಈ ದರದ ಅನ್ವಯ ಮರಳು ಮಾರಾಟ ಮಾಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಡಿ.ಸಿ. ನಾಟಿಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.