ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಾಜ ತಿದ್ದುವ ನಿಟ್ಟಿನಲ್ಲಿ ಮಠಗಳ ಸೇವೆ ಸ್ಮರಣೀಯ: ನ್ಯಾ.ಮಳಿಮಠ

Rashmi Kasaragodu
Updated On : 8 Mar 2014, 10:54 am

ಕ.ಪ್ರ. ವಾರ್ತೆ  ಯಾದಗಿರಿ  ಮಾ.7
ದೇಶದಲ್ಲಿ ಅನೀತಿ, ಅಸತ್ಯ, ಅಪ್ರಾಮಾಣಿಕತೆಗಳು ತುಂಬಿ ತುಳುಕುತ್ತಿವೆ. ಭ್ರಷ್ಟಚಾರ ಬ್ರಹ್ಮಾಂಡ ಸ್ವರೂಪ ತಾಳಿ ತಾಂಡವವಾಡುತ್ತಿದೆ. ದೇಶ ಅವನತಿಯ ಅಂಚಿಗೆ ಹೋಗುತ್ತಿದೆ. ಆದ್ದರಿಂದ ಸಮಾಜವನ್ನು ಸರಿದಾರಿಗೆ ತರುವ ಕೆಲಸವನ್ನು ಮಠಗಳು ಮಾಡಬೇಕಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ವಿ.ಎಸ್. ಮಳಿಮಠ್ ಹೇಳಿದರು.
ತಾಲೂಕಿನ ಅಬ್ಬೆತುಮಕೂರ 59ನೇ ಜಾತ್ರಾಮಹೋತ್ಸವದ ಮಾನವಧರ್ಮ ಸಮಾವೇಶದಲ್ಲಿ ಶ್ರೀ ಮಠದಿಂದ ನೀಡುವ ವಿಶ್ವಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಸಿದ್ಧಸಂಸ್ಥಾನ ಮಠವು ತ್ರಿವಿಧ ದಾಸೋಹಗಳನ್ನು ನಡೆಸುವ ಮೂಲಕ ಲೋಕ ಕಲ್ಯಾಣ ಕಾರ್ಯಗಳನ್ನು ಸಮರ್ಥವಾಗಿ ಮಾಡಿಇಡೀ ದೇಶದ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಜ್ಜಯನಿ ಜಗದ್ಗುರುಗಳಾದ ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬೀಜ ಭೂಮಿಯಲ್ಲಿ ಬಿತ್ತಿದಾಗ ಒಂದು ಕಾಳು ನೂರಾರು ಕಾಳುಗಳಾಗಿ ಹೊರಹೊಮ್ಮಿಬರುತ್ತದೆ. ಹಾಗೆಯೇ ಮನುಷ್ಯ ಜನ್ಮ ಶ್ರೇಷ್ಠವಾದುದು. ಮಾನವರಾಗಿ ಜನ್ಮತಾಳಿದ ಮೇಲೆ ನಾಲ್ಕು ಜನರ ಬದುಕಿಗೆ ನೆರವಾಗಬೇಕು. ಅಂತಹ ಜೀವನಕ್ಕೆ ಮೌಲಿಕತೆ ಬರುತ್ತದೆ ಎಂದು ಹೇಳಿದರು.
ನೇತೃತ್ವ ವಹಿಸಿ ಮಾತನಾಡಿದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಮಾತನಾಡಿ,  ಇಡೀ ಮನುಕುಲವನ್ನು  ಒಂದೇ ಮುಖವನ್ನಾಗಿ ಕರೆದುಕೊಂಡು ಹೋದವರು, ವಿಶ್ವಾರಾಧ್ಯರು. ಅಂತೆಯೇ ಈ ಮಠದಲ್ಲಿ ಯಾವುದೇ ಜಾತಿ ಬೇಧವಿಲ್ಲ. ಸಕಲ ಜಾತಿಯ ಜನಾಂಗದವರು ಒಂದೇ ಭಾವದಲ್ಲಿ ಈ ಮಠಕ್ಕೆ ಬರುತ್ತಾರೆ. ಅದಕ್ಕಾಗಿಯೇ ವಿಶ್ವಾರಾಧ್ಯ ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿದ್ದಾನೆ ಎಂದು ಹೇಳಿದರು.
ವೇದಿಕೆ ಮೇಲೆ ಮಾಗಣಗೇರಿ ಡಾ. ವಿಶ್ವಾರಾಧ್ಯ ಶ್ರೀಗಳು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ರಾಯಚೂರ ಶಾಂತಮಲ್ಲ ಸ್ವಾಮೀಜಿ, ದೇವದುರ್ಗದ ಕಪಿಲಸಿದ್ದರಾಮ ಸ್ವಾಮೀಜಿ, ಹಲಕರ್ಟಿಯ ಮನೀಂದ್ರ ಶಿವಾಚಾರ್ಯರು, ಶಹಾಪುರದ ಬಸಯ್ಯ ಶರಣರು, ಮಾಜಿ ಸಚಿವ ಸಿದ್ದರಾಮ ಮೇತ್ರೆ, ಶಾಸಕ ಗುರುಪಾಟೀಲ್ ಶಿರವಾಳ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement