ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದೇಶ ಮುನ್ನಡೆಸುವ ಸಾಮರ್ಥ್ಯ ಮಹಿಳೆಯರಲ್ಲಿದೆ

Lingaraj Badiger
Updated On : 9 Mar 2014, 10:43 am

ಹುಣಸಗಿ: ಮಹಿಳೆ ಇಂದು ಕುಟುಂಬ ಅಷ್ಟೇ ಅಲ್ಲದೆ, ಇಡಿ ದೇಶವನ್ನೇ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಮೇಘಾ ದೇಶಮುಖ ತಿಳಿಸಿದರು.
ಅವರು ಶನಿವಾರ ಪಟ್ಟಣದಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ,್ತ ಅಂತರಿಕ್ಷಕ್ಕೆ ಹಾರಿದ ಕಲ್ಪನಾ ಚಾವ್ಲಾ, ವೀರರಾಣಿ ಕಿತ್ತೂರು ಚೆನ್ನಮ್ಮ , ಭಾರತದ ಕೋಗಿಲೆ ಸರೋಜಿನಿ ನಾಯ್ಡು, ಅಗಾಧ ನೆನಪಿನ ಶಕ್ತಿಯ ಗಣಿತ ತಜ್ಞೆ ಶಕುಂತಲಾದೇವಿ ಅವರಂತಹ ಮಹಿಳೆಯರು ಇಂದಿಗೂ ಪ್ರಸ್ತುತ. ಅವರ ಸಾಧನೆಗಳನ್ನು ನಾವು ನೆನಪಿಸಿಕೊಂಡು ಇಂದು ಮಹಿಳೆ ಅಬಲೆ  ಅಲ್ಲ ಸಬಲೆ ಎಂದು ಸಾಬೀತು ಮಾಡಲು ಮುಂದಾಗಬೇಕು ಎಂದರು.
ಬೋರಮ್ಮ ಯಡಿಯೂರಮಠ ಮಾತನಾಡಿ, ಈ ದೇಶದ ಮಹಿಳಾ ಪ್ರಧಾನ ಮಂತ್ರಿ ದಿ. ಇಂದಿರಾಗಾಂಧಿ, ದಿಟ್ಟ ಪೋಲಿಸ್ ಅಧಿಕಾರಿ ಕಿರಣ ಬೇಡಿ, ನಮಗೆಲ್ಲ ಆದರ್ಶಪ್ರಾಯರಾಗಬೇಕು. ಹದಿಹರೆಯದ ಹೆಣ್ಣು ಮಕ್ಕಳು ಸಂಸ್ಕಾರವಂತರಾದಾಗ ಈ ದೇಶಕ್ಕೆ ಅಗತ್ಯವಿರುವ ದಿಟ್ಟ ಯುವಕ ಯುವತಿಯರ ನಿರ್ಮಾಣ ಸಾಧ್ಯ ಎಂದರು.
ರಾಜ್ಯಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪುರಸ್ಕೃತೆ ಶಶಿಕಲಾ ಹಿರೇಮಠ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗ್ರಾಪಂ. ಉಪಾಧ್ಯಕ್ಷೆ ಬಸಮ್ಮ ದೇಸಾಯಿ, ಭಾರತಿ ಪುರಾಣಿಕಮಠ, ಜ್ಯೋತಿ ಗಣಾಚಾರಿ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement