ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಕ್ತಗಣದಲ್ಲಿ ಭೋಜಲಿಂಗೇಶ್ವರರ ರಥೋತ್ಸವ

Rashmi Kasaragodu
Updated On : 10 Mar 2014, 11:13 am

ಯಾದಗಿರಿ: ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಸೂಗೂರು ಎನ್. ಗ್ರಾಮದ ಭೋಜಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ಜರುಗಿತು.
 ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತಾನವರ ನೇತೃತ್ವದಲ್ಲಿ ಸಂಜೆ ಜರುಗಿದ ರಥೋತ್ಸವದ ಮೇಲೆ ಭಕ್ತರು ಫಲ ಪುಷ್ಪಗಳನ್ನು ಎಸೆದು ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು. ಇದಕ್ಕೂ ಮುನ್ನ ಹತ್ತು ಹಲವು ಕಾರ್ಯಕ್ರಮಗಳು ನಡೆದು ಭಕ್ತ ಜನತೆ ಭಾಗವಹಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು.
  ಮಠದಲ್ಲಿ ಜಾತ್ರೆ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರವಂತರು ಪುರವಂತರ ಸೇವೆಯನ್ನು ನಡೆಸಿಕೊಟ್ಟರು. ಹಲಗೆ, ಭಾಜಾ-ಭಜಂತ್ರಿ, ಡೊಳ್ಳು ಮುಂತಾದ ವಾದ್ಯಗಳ ಸದ್ದು, ಭಕ್ತರ ಸಡಗರ, ಸಂಭ್ರಮ ಇನ್ನಷ್ಟು ಹೆಚ್ಚುವಂತೆ ಮಾಡಿತ್ತು. ಇದಕ್ಕೂ ಮುನ್ನ ಭಕ್ತ ಬಾಂಧವ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ಪೀಠಾಧಿಪತಿ ಹಿರಗಪ್ಪನವರು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
 ಜಾತ್ರ ಮಹೋತ್ಸವಕ್ಕೆ ನೆರೆಯ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು, ಭೋಜಲಿಂಗೇಶ್ವರರ ಜಾತ್ರಾ ನಿಮಿತ್ತ ಭಕ್ತರು ಬಸ್, ಕಾರು, ಆಟೋ ಸೇರಿದಂತೆ ಇನ್ನೀತರ ವಾಹನಗಳಲ್ಲಿ ಶ್ರೀಮಠಕ್ಕೆ ಆಗಮಿಸಿ ಪೀಠಾಧಿಪತಿ ಹಿರಗಪ್ಪ ತಾತಾನವರ ಆಶೀರ್ವಾದ ಪಡೆಯುವದರೊಂದಿಗೆ ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement