ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾದಿಗ ಜನಾಂಗಕ್ಕೆ ರುದ್ರಭೂಮಿಗೆ ಆಗ್ರಹ

Rashmi Kasaragodu
Updated On : 10 Mar 2014, 11:14 am

ಯಾದಗಿರಿ:ಜಿಲ್ಲೆಯ ಶಹಾಪುರ ತಾಲೂಕಿನ ್ಡಹೋತಪೇಟ ಗ್ರಾಮದ ಮಾದಿಗ ಜನಾಂಗಕ್ಕೆ ಸರ್ಕಾರದಿಂದ ರುಧ್ರಭೂಮಿ ಮಂಜೂರಿ ಮಾಡಬೇಕೆಂದು ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗ್ರಾಮ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಮಾದಿಗ ಜಾನಾಂಗದವರು ಕಡು ಬಡವರಾಗಿದ್ದಾರೆ. ಮೃತಪಟ್ಟವರಿಗೆ ಖಾಸಗಿ ಜಮೀನಿನಲ್ಲಿ ದಫನ್  ಮಾಡಲಾಗುತ್ತಿದ್ದು, ಇದರಿಂದ ಮಾದಿಗ ಜನಾಂಗದವರಿಗೆ ತೀವ್ರ ತೊಂದರೆಯಾಗುತ್ತಿದೆ. ಮೃತರನ್ನು ಸಮಾಧಿ ಮಾಡಲು ಸರ್ಕಾರದಿಂದ ರುದ್ರಭೂಮಿ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ, ಧರ್ಮಪ್ಪ, ಹಣಮಂತ ಮತ್ತಿತರರು ಇದ್ದರು.
ಸಹಬಾಳ್ವೆಯಿಂದ ನೆಮ್ಮದಿ: ಜೈನ್
ಯಾದಗಿರಿ: ಸಹಾಯ, ಸಹಕಾರ ಮತ್ತು ಸಹಬಾಳ್ವೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಸುರೇಶ ಜೈನ್ ಹೇಳಿದರು. ಶುಕ್ರವಾರ ಸರ್ಕಾರಿ ಪದವಿ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಅಧ್ಯಯನ ಮಾಡಿದರೆ ಭಾರತದ ಭವ್ಯ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯಎಂದರು. ಅಶೋಕ ವಾಟಕರ್ ಮಾತನಾಡಿದರು. ಮಲ್ಹಾರ ಡಿ. ಪಾಟೀಲ್ ಮಾತನಾಡಿದರು. ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಮೋನಯ್ಯ ಇದ್ದರು.
'ಪರೋಪಕಾರಿ ಜೀವನ ನಡೆಸಿ'
ಯಾದಗಿರಿ: ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿ ಪರೋಪಕಾರಿ ಜೀವನ ನಡೆಸಬೇಕು ಎಂದು ನಿವೃತ್ತ ಮುಖ್ಯಗುರು ಅಯ್ಯಣ್ಣ ಹುಂಡೇಕಾರ ಹೇಳಿದ್ದಾರೆ. ಇಲ್ಲಿನ ದಯಾನಂದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸ್ವಾತಂತ್ಯ ಹೋರಾಟಗಾರ, ದಯಾನಂದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಲಿಂ. ಈಶ್ವರಲಾಲ್ ಭತಡಾಜಿ ಅವರ 22 ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋಟೇಶ್ವರ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಸಹ ಓದಿನಲ್ಲಿ ಹೆಚ್ಚು ಆಸಕ್ತಿ ತೋರಿಸಬೇಕು ಎಂದರು.
ಗುಂಪು ಘರ್ಷಣೆ; ಗಂಭೀರ ಗಾಯ
ಸುರಪುರ: ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಎರಡು ಕೋಮಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ನಡೆದಿದೆ. ಒಬ್ಬ ವ್ಯಕ್ತ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ. ಗುಂಪು ಘರ್ಷಣೆಯಲ್ಲಿ ಎರಡು ಕೋಮಗಳು ಪರಸ್ಪರ ಕಲ್ಲು ತೂರಾಟ, ಮಚ್ಚು ಹಾಗೂ ಮಾರಕಾಸ್ತ್ರಗಳನ್ನು ಬಳಿಸಿರುವುದರಿಂದ ಎರಡು ಗುಂಪುಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತಂತೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement