ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ದಾಸೋಹದಿಂದ ಜೀವನ ಸಾರ್ಥಕ'

Rashmi Kasaragodu
Updated On : 12 Mar 2014, 12:51 pm

ಕ.ಪ್ರ. ವಾರ್ತೆ    ಚಿಂಚೋಳಿ    ಮಾ.11
ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಜ್ಜನರ ಆಶೀರ್ವಾದ ಪಡೆಯಬೇಕಾದರೆ ಶ್ರದ್ಧೆ ಹಾಗೂ ಭಕ್ತಿಗಳಿರಬೇಕು ಎಂದು ಹಾರಕೂಡ ಚಿಂಚೋಳಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ಲಿಂ. ಸದ್ಗುರು ಚೆನ್ನಬಸವ ಶಿವಯೋಗಿಗಳ 63ನೇ ಜಾತ್ರಾ ಮಹೋತ್ಸವ ಶಿವಾನುಭವ ಚಿಂತನಗೋಷ್ಠಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಕಲ್ಯಾಣ ನಾಡಿನಲ್ಲಿ ಅನೇಕ ವಿಭೂತಿ ಪುರುಷರು ಬಾಳಿ ಬೆಳಗಿದ್ದಾರೆ. ಚೆನ್ನಬಸವ ಶಿವಯೋಗಿಗಳು ಸಂಸ್ಕೃತ ಭಾಷಾ ಪಂಡಿತರಾಗಿದ್ದರು ಎಂದರು.
ಬೀದರ್ ಜಿಲ್ಲೆಯ ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು. ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಶಾಸಕ ಡಾ. ಉಮೇಶ ಜಾಧವ್, ಮಾಜಿ ಸಚಿವ ವೈಜನಾಥ ಪಾಟೀಲ್, ಗೋಪಾಲರಾವ ಕಟ್ಟಿಮನಿ ಮಾತನಾಡಿದರು.
ಸೋನ್ಯಾಲಗಿರಿ ಪರ್ವತಲಿಂಗ ಮಹಾರಾಜ, ಸೈಯದ್ ಅಕಬರ್ ಹುಸೇನಿ ಸಜ್ಜಾದೇ ನಶಿನ್ ಬಡಿದರ್ಗಾ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಚನ್ನಬಸಪ್ಪ ನಾವದಗಿ, ಶಾಮರಾವ ಸೀಳಿನ್  ಪ್ರೊ. ಚಂದ್ರಶೇಖರ ಬುಗ್ಗಿ, ಸುಭಾಷ್ ಸೀಳಿನ್, ಅಜಿತ ಪಾಟೀಲ್, ನಾಗರಾಜ ಕಲ್ಬುರ್ಗಿ ,ಬಸವರಾಜ ಮಲಿ, ಬೋಗಲಿಂಗಪ್ಪ ಬಬಲಾದ, ರೇವಣಸಿದ್ಧ ಮಜ್ಜಗಿ, ರಾಜಶೇಖರ ಮಜ್ಜಗಿ, ಶ್ರೀಕಾಂತ, ಗೌತಮ್ ಪಾಟೀಲ್ ಇದ್ದರು.
ಸಂತೋಷ ಕಡಗದ ಸ್ವಾಗತಿಸಿದರು. ಜಗನ್ನಾಥ ಸೇರಿಕಾರ ನಿರೂಪಿಸಿದರು. ನಾಗೇಶ ಭದ್ರಶೆಟ್ಟಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement