ಬೈಕ್ ಹತ್ತಿದ ಸಚಿವರು...
ಗುರುಮಠಕಲ್: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬೂರಾವ ಚಿಂಚನಸೂರ ಅವರು ಮಂಗಳವಾರ ಭಾರತ ನಿರ್ಮಾಣ ಯಾತ್ರೆ ಪ್ರಯುಕ್ತ ಮತಕ್ಷೇತ್ರದ ಗಾಜರಕೋಟ ಗ್ರಾಮದಿಂದ ಗುರುಮಠಕಲ್ ಪಟ್ಟಣಕ್ಕೆ ಸುಮಾರು 15 ಕಿ.ಮೀ ದೂರದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪಕ್ಷದ ಯುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಲು ಬಾಬೂರಾವ ಅವರು ಚಪೇಟ್ಲಾ ಗ್ರಾಮದಿಂದ ಸುಮಾರು 4 ಕಿ.ಮೀ ದೂರದವರೆಗೆ ಬೈಕ್ ಸವಾರಿ ಮಾಡಿ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿದರು.