ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಾರತ ನಿರ್ಮಾಣ ಪಾದಯಾತ್ರೆ ಯಶಸ್ವಿ

Rashmi Kasaragodu
Updated On : 12 Mar 2014, 12:52 pm

ಗುರುಮಠಕಲ್: ಸಚಿವ ಬಾಬುರಾವ್ ಚಿಂಚನಸೂರ್ ನೇತೃತ್ವದಲ್ಲಿ ಮಂಗಳವಾರದಂದು ಗಾಜರಕೋಟ್ ಗ್ರಾಮದಿಂದ ಗುರುಮಠಕಲ್‌ವರೆಗೆ ನಡೆದ ಭಾರತ ನಿರ್ಮಾಣ ಪಾದಯತ್ರೆ ಯಶಸ್ಸು ಕಂಡಿತ್ತು.
ಗಾಜರಕೋಟ್ ಗ್ರಾಮದಿಂದ ಗುರುಮಠಕಲ್‌ವರೆಗೆ 12 ಕಿಮಿನಲ್ಲಿ ಪಾದಯಾತ್ರೆ ನಡೆಸಿದ ಸಚಿವ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಧ್ವಜವನ್ನು ಕೈನಲ್ಲಿ ಹಿಡಿದು, ದಾರಿಯಲ್ಲಿ ಜನರನ್ನು ನಿಲ್ಲಿಸಿ ಸೌಜನ್ಯದಿಂದ ಮಾತನಾಡಿಸುತ್ತಿದ್ದರು. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಇಲ್ಲದಿದ್ದರೇ ತಲಾಂತರಗಳು ಕಳೆದರೂ ನಮ್ಮ ಭಾಗಕ್ಕೆ 371(ಜೆ) ಕಲಂ ಜಾರಿಯಾಗುತ್ತಿರಲಿಲ್ಲ ಎಂದು ಜವಳಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಚಿಂಚನಸೂರ್ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಯು. ಭೂಪತಿ, ಗೌತಮ್, ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ, ಹಿರಿಯ ಮುಖಂಡ ಅಣ್ಣರಾವ ಮುತ್ತಟ್ಟಿ, ಜಿ.ಕಾಂ, ಖಜಾಂಚಿ ಚಿದಾನಂದಪ್ಪ ಕಾಳಬೆಳಗುಂದಿ, ಗುರುಮಠಕಲ್ ಮತ್ತು ಸೈದಾಪೂರ ಬ್ಲಾಕ್ ಅಧ್ಯಕ್ಷ  ಮಹಿಪಾಲ ರೆಡ್ಡಿ ಪಾಟೀಲ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ಬಸವರಾಜ ಸ್ವಾಮಿ ಬದ್ದೇಪಲ್ಲಿ, ಬಸವಣ್ಣ ದೇವರಹಳ್ಳಿ, ಬಸವರಾಜಪ್ಪ ಬಾಗಿಲಿ, ಹಣಮಂತಪ್ಪ ಬಳಿಚಕ್ರ, ರಘುನಾಥ ರೆಡ್ಡಿ ನಜರಾಪುರ, ದಶರಥರಾವ ಧಡಂಗೆ, ಪಾಪಣ್ಣ ಅಳೆಗಾರ, ನರಸಿಂಹ ರೆಡ್ಡಿ ಚಂಡರಕಿ, ಶ್ಯಾಮಪ್ಪ ಚಂಡರಿಕಿ, ಆನಂತಪ್ಪ ಯದ್ಲಾಪೂರ್, ಚುಕ್ಕಪ್ಪ ನಾಯಕ್, ಭೀಮಶಪ್ಪ ಮನ್ನೆ, ಫಯಾಜ್ ಅಹ್ಮದ್ ಮತ್ತಿತರರಿದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement