ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

300 ಲೀಟರ್ ಕಲಬೆರಕೆ ಸೇಂದಿ ವಶಕ್ಕೆ

Rashmi Kasaragodu
Updated On : 13 Mar 2014, 11:55 am

ಗುಲ್ಬರ್ಗ/ ಚಿತ್ತಾಪುರ: ಉಪ ವಿಭಾಗದ  ಮೈನುದ್ದೀನ್ ಅಬಕಾರಿ ಉಪ ಅಧೀಕ್ಷ ನೇತೃತ್ವದಲ್ಲಿ ಗುಲ್ಬರ್ಗ ವಿಭಾಗದ ಎಫ್.ಎಚ್. ಚಲವಾದಿ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಮಾರ್ಗದರ್ಶನದನ್ವಯ ತಾಲೂಕಿನಲ್ಲಿ ಸೇಂದಿ ಮಾರಾಟ ಕೇಂದ್ರಗಳ ಮೇಲೆ ದಾಳಿ ಮಾಡಿ 300 ಲೀಟರ್ ಕಲಬೆರೆಕೆ ಸೇಂದಿ ವಶಕ್ಕೆ ಪಡೆದು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿರುವ ತಾಲೂಕಿನ ಶಹಾಬಾದ್ ಪಟ್ಟಣದ ಚುನ್ನಾ ಭಟ್ಟಿ ಏರಿಯಾದ ಭೀಮಾಬಾಯಿ ಗಂಡ ಹಾಜಪ್ಪರವರ ಮನೆ ಮೇಲೆ ದಾಳಿ ಮಾಡಿ 200 ಲೀಟರ್ ಸೇಂದಿ ಹಾಗೂ ಬೆಳಗೇರಾ ಯಾಗಾಪುರ ಚಂದುನಾಯಕ ತಾಂಡಾದಲ್ಲಿ ಲಾಲಿಬಾಯಿ ಗಂಡ ಜಯರಾಜ ಎಂಬುವರ ಮನೆಯಲ್ಲಿ ಮಾರಾಟಕ್ಕೆಂದು ಸಂಗ್ರಹ ಮಾಡಿದ್ದ 100 ಲೀ. ಕಲಬೆರೆಕೆ ಸೇಂದಿಯನ್ನು ಚಿತ್ತಾಪುರ ಉಪ ವಿಭಾಗ ನಿರೀಕ್ಷಕ ಅಬಕಾರಿ ಮುಜಾವರ ವಶಪಡಿಸಿಕೊಂಡರು. ಜಿ.ಎಸ್. ಪಾಟೀಲ್, ವಿದ್ಯಾಸಾಗರ ಘನಾತೆ, ಗೋಪಾಳೆ ಪಂಡಿತ, ಅಬಕಾರಿ ಉಪ ನರೀಕ್ಷಕ ನಾಗಪ್ಪ ಶಬ್ಬೀರಮಿಯ್ಯ ಲಕ್ಷ್ಮಣ ರಾಠೋಡ, ಮಹಮ್ಮದ್ ಇನಾಂ ಮಲ್ಲಿಕಾರ್ಜುನ ಹನಗಂಡಿ ದಾಳಿಯಲ್ಲಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement