ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಲಿಕಲ್ಲಿನೇಟಿಗೆ 200 ಕೋಟಿ ಹಾನಿ

Rashmi Kasaragodu
Updated On : 13 Mar 2014, 11:56 am

ಗುಲ್ಬರ್ಗ: ಈಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಲೆ ಏಟಿಗೆ ಆಳಂದ ತಾಲೂಕಿನ ದ್ರಾಕ್ಷಿ, ಪಪಾಯಿ, ಬಾಳೆ, ದಾಳಿಂಬೆಂಯತಹ ತೋಟಗಾರಿಕೆ ಬೆಳೆಗಳು, ಬೆಂಡಿ, ಗಜ್ಜರಿ ಸೇರಿದಂತೆ 2000 ಎಕರೆಗೂ ಅಧಿಕ ತರಕಾರಿ ಬೆಳೆ ಹಾಳಾಗಿ ರು. 200 ಕೋಟಿಯಷ್ಟು ನಷ್ಟ ರೈತರಿಗೆ ಸಂಭವಿಸಿದೆ. ರಾಜ್ಯ ಸರ್ಕಾರ ಯಾಕೆ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಪ್ರಶ್ನಿಸಿ ಆ ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ ನೇತೃತ್ವದಲ್ಲಿ ರೈತರು ಬುಧವಾರ ನಗರದಲ್ಲಿ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದ ಗಮನ ಸೆಳೆಯುವ ಯತ್ನ ಮಾಡಿದರು.
ಅನಾಹುತವಾಗಿದ್ದರೂ ಸರ್ಕಾರ ಇತ್ತ ನೋಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಚುನಾವಣೆ ನೀತಿ ಸಂಹಿತೆ ಇದ್ದರೂ, ಆಯೋಗಕ್ಕೆ ರೈತರಿಗಾದ ಹಾನಿಯನ್ನು ಗಮನಕ್ಕೆ ತಂದು ಪೂರ್ವಾನುಮತಿ ಪಡೆದೇ ನೆರವಿಗೆ ಸರ್ಕಾರ ಬರಲಿ. ಈ ಬಗ್ಗೆ ತಕ್ಷಣ ಮುಂದುವರಿಯಲಿ ಎಂದು ಬಿಆರ್ ಆಗ್ರಹಿಸಿದ್ದಾರೆ. ಶಿವಪುತ್ರಪ್ಪ ಪಾಟೀಲ್ ಮುನ್ನಳ್ಳಿ, ಬಿಆರ್ ಪಾಟೀಲ್ ಸೇರಿದಂತೆ ನೂರಾರು ರೈತರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
'ಬೆಳೆಗಳಿಗೆ ವಿಮೆ ಮಂಜೂರು ಮಾಡಿ': ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳ ವಿಮೆ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿತು. ಪ್ರಸ್ತುತದಲ್ಲಿ ರೈತರು ಬೆಳೆದ ಬೆಳೆಗೆ ನಿಖರವಾದ ಬೆಲೆ ಸಿಗದೆ ಒದ್ದಾಡುತ್ತಿರುವ ಸಮಯದಲ್ಲಿ ಸಾಲ ಮಾಡಿ ಬೆಳೆದ ಅಪಾರ ಬೆಳೆಗಳು ಮಳೆಯಿಂದ ಹಾಳಾಗಿವೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂಥ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸಮೀಕ್ಷೆ ನಡೆಸಿ ಬೆಳೆ ವಿಮೆ ಮಂಜೂರು ಮಾಡಬೇಕೆಂದು ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಗೌರಮ್ಮ ಪಾಟೀಲ್ ಆಗ್ರಹಿಸಿದ್ದಾರೆ.
ಪರಿಹಾರಕ್ಕೆ ಆಗ್ರಹಿಸಿ ಎಂಎಲ್ಸಿ ಮನವಿ: ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಬೆಳೆಯ ಬದುಕು ಎಂದು ನಂಬಿ ಬದುಕು ನಡೆಸುತ್ತಿರುವ ಗುಲ್ಬರ್ಗ- ಯಾದಗಿರಿ ಜಿಲ್ಲೆಗಳ ರೈತರ ಮನೆ ಹಾಗೂ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರೈತರ ಜೀವನ ಅಸ್ತವ್ಯಸ್ತವಾಗಿದೆ. ಕೂಡಲೇ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement