ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

20 ರಿಂದ ಜಾತ್ರಾ ಮಹೋತ್ಸವ

Rashmi Kasaragodu
Updated On : 14 Mar 2014, 11:51 am

ಜೇವರ್ಗಿ: ತಾಲೂಕಿನ ಅಂಕಲಗಾ ಗ್ರಾಮದಲ್ಲಿ ಮಾ.20 ರಿಂದ ರಾಜಾ ಭಕ್ಷಾರವರ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಮಾ.20 ರಂದು ರಾತ್ರಿ 10ಕ್ಕೆ ರಾಜಾ ಭಕ್ಷಾರವರ ಗಂಧೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದರ್ಗಾಕ್ಕೆ ತಲುಪಲಿದೆ. ಮಾ.21 ರಂದು ರಾಜಾ ಭಕ್ಷಾರವರ ದರ್ಗಾದಲ್ಲಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಮಾ.22 ರಂದು ಸಂಜೆ 4ಕ್ಕೆ ರಾಜಾ ಭಕ್ಷಾರವರ ದರ್ಗಾದ ಹತ್ತಿರ ಜಂಗೀ ಕುಸ್ತಿಗಳು ನಡೆಯಲಿವೆ. ಅಂತಿಮವಾಗಿ ಗೆದ್ದವರಿಗೆ ತೊಲೆ ಬೆಳ್ಳಿ ಖಡೆ ತೊಡಿಸಿ ಸನ್ಮಾನಿಸಲಾಗುವುದು. ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಮುಕ್ತ ವಿಶ್ವವಿದ್ಯಾಲಯದ ಶುಲ್ಕ ಪಾವತಿಗೆ ಸೂಚನೆ
ಗುಲ್ಬರ್ಗ: ಕರ್ನಾಟಕ ಮುಕ್ತ ವಿವಿ 2014ರ ಮೇ- ಜೂನ್‌ನಲ್ಲಿ ನಡೆಸುವ ಎಂಎ, ಎಂಕಾಂ (ಪ್ರಥಮ/ಅಂತಿಮ) ಪರೀಕ್ಷಾ ಶುಲ್ಕ 1200 ನಿಗದಿಪಡಿಸಿದೆ. ದಂಡ ಶುಲ್ಕವಿಲ್ಲದೆ ಏ.5 ರವರೆಗೆ ಹಾಗೂ 200 ದಂಡ ಶುಲ್ಕದೊಂದಿಗೆ ಏ.17ರವರೆಗೆ ಪಾವತಿಸಲು ಕೋರಲಾಗಿದೆ. ಮಾಹಿತಿಗೆ 08421- 2519942, 08472-265868 ಗೆ  ಸಂಪರ್ಕಿಸಲು ಕೋರಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement