ಉಚಿತ ಚರ್ಮರೋಗ ತಪಾಸಣೆ
ಗುರುಮಠಕಲ್: ಗುರುಮಠಕಲ್ ಪಟ್ಟಣದ ಶಾರದಾ ಕ್ಲಿನಿಕ್ನಲ್ಲಿ ಉಚಿತ ಚರ್ಮರೋಗ ತಪಾಸಣೆ ಶಿಬಿರ ನಡೆಯಿತು. ಯಾದಗಿರಿಯ ಚರ್ಮರೋಗ ತಜ್ಞರಾದ ಶ್ವೇತಾ ವೀರೇಶ ಜಾಕಾ ಅವರು ಚರ್ಮ ಗಾಯ, ಹುಟ್ಟು ಮುಚ್ಚು, ಪಾದಗುಳ್ಳೆ, ಅಂಗಾಲಿನ ಆನಿ, ಮೊಡವೆ, ಕಲೆ, ಕೂದಲು ಉದರುವಿಕೆ, ಭಂಗು, ಮುಖದ ಹೊಳಪು ಹೆಚ್ಚಿಸುವುದು ಸೇರಿದಂತೆ ವಿವಿಧ ಬಗೆಯ ಚರ್ಮಕ್ಕೆ ಸಂಬಂಧಿಸಿದ ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ ಔಷಧಿ ವಿತರಣೆ ಮಾಡಿದರು. ಡಾ. ನಾಗರಾಜ ಜಾಡರ್, ಡಾ. ಜಯಶ್ರೀ ನಾಗರಾಜ ಇದ್ದರು