ನೂತನ ಅಡುಗೆ ಮಾಡುವ ಸ್ಪರ್ಧೆ
ಗುರುಮಠಕಲ್: ಇಲ್ಲಿನ ಸರ್ಕಾರಿ ಪಪೂ ಕಾಲೇಜಿನ ಬಾಲಕಿಯರ ವಿಭಾಗದಲ್ಲಿ ಗುರುವಾರ ವಿನೂತವಾಗಿ ಅಡುಗೆ ಮಾಡುವ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ 8-10ನೇ ತರಗತಿಯ ಸುಮಾರು 4 ಜನರ ಗುಂಪಿನ 18 ಗುಂಪುಗಳನ್ನು ಒಳಗೊಂಡ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಸ್ಪರ್ಧೆಯ ಉಸ್ತುವಾರಿ ವಹಿಸಿದ ಮುಖ್ಯ ಶಿಕ್ಷಕ ಮೊಗಲಪ್ಪ ಮಾತನಾಡಿ, ಹೆಣ್ಣು ಮಕ್ಕಳಲ್ಲಿ ಅಡುಗೆ ಮಾಡುವ ಕಲೆಯನ್ನು ಶ್ಲಾಘಿಸಿದರು. ನಂತರ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.