ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅವ್ಯವಸ್ಥೆ ಆಗರ ಕೆಂಭಾವಿಯ ಬಸ್ ನಿಲ್ದಾಣ

Rashmi Kasaragodu
Updated On : 15 Mar 2014, 11:38 am

ಕೆಂಭಾವಿ: ಪಟ್ಟಣದಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಪ್ರಯಾಣಿಕರಿಗೆ ಉಪಯೋಗಕ್ಕಲ್ಲದೆ ಅನೈತಿಕ ಚಟುವಟಿಕೆಗಳ ಆಗಾರವಾಗಿ ಮಾರ್ಪಟ್ಟಿದೆ. ಹೀಗಾಗಿ ಅದು ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
  ಇಲ್ಲಿ ಇರುವ ನಿಲ್ದಾಣಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ಇರುವ ಹಿನ್ನಲ್ಲೆಯಲ್ಲಿ ಯಾರೊಬ್ಬರು ಕೂಡ ನಿಲ್ದಾಣಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ನಿಲ್ದಾಣವು ದಾರಿಹೋಕರಿಗೆ ಜಾನುವಾರಗಳಿಗೆ, ಜೂಜುಕೋರರರಿಗೆ ಅನುಕೂಲಕರ ತಾಣವಾಗಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಇಲ್ಲಿ ಬರುವ ಚಾಲಕ, ನಿರ್ವಾಹಕರು, ಬಸ್‌ನಿಲ್ದಾಣದಲ್ಲಿ ಮಲದೆ ಗ್ರಾಮದ ಹಳೆ ಬಸ್‌ನಿಲ್ದಾಣ ಪ್ರದೇಶದಲ್ಲಿ ನಿದ್ರೆ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮುಖ್ಯ ಕಾರಣ ಎನ್ನುತ್ತಾರೆ ಗ್ರಾಮಸ್ಥರು.
  ಈ ಬಗ್ಗೆ ಸಂಬಂಧಿಸಿದ ಅಧಿಕಾರಗಳನ್ನು ಸಂಪರ್ಕಿಸಿದರೆ ಅವರು ಹಾರಿಕೆ ಉತ್ತರ ಹೇಳುತ್ತಾರೆ.  ಹೀಗಾಗಿ ಇಲ್ಲಿನ ಸಮಸ್ಯೆಯ ಬಗ್ಗೆ ಯಾರಿಗೆ ಹೇಳಿಕೊಳ್ಳಬೇಕೆನ್ನುವ ಗೊಂದಲದಲ್ಲಿ ಪ್ರಯಾಣಿಕರಿದ್ದಾರೆ. ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ಹರಿಸಿ, ಬಸ್‌ನಿಲ್ದಾಣದ ಅವ್ಯವಸ್ಥೆ ಸರಿ ಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement