'ಖರ್ಗೆ, ಧರಂ ಗೆಲವು ಖಚಿತ'
ಚಿಂಚೋಳಿ: ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರು ಹಿಂದುಳಿದ ಭಾಗಕ್ಕೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದು, ಇವರಿಬ್ಬರ ಗೆಲವು ಖಚಿತ ಎಂದು ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಎನ್.ಧರಂಸಿಂಗ್ ಅವರು ಮಾಡಿರುವ ಸಾಧನೆಗಳಿಂದಾಗಿ ಹಿಂದುಳಿದ ಭಾಗ ಅಭಿವೃದ್ಧಿಯಾಗುತ್ತಿದೆ. ಸಾಧನೆಗೆ ಜನ ಬೆಂಬಲಿಸಬೇಕಾಗಿದೆ ಎಂದರು.