ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿಗೆ ಐಜಿಪಿ ಭೇಟಿ

Rashmi Kasaragodu
Updated On : 15 Mar 2014, 11:39 am

ಹುಣಸಗಿ: ಸಮೀಪದ ಬಲಶೆಟ್ಟಿಹಾಳ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿಗೆ ಶುಕ್ರವಾರ ಸಾಯಂಕಾಲ ಈಶಾನ್ಯ ವಲಯದ ಐಜಿಪಿ ಸುರೇಶ ಮಹ್ಮದ ಕುನ್ಹಿ ಭೇಟಿ ನೀಡಿ ಪರಿಶೀಲಿಸಿದರು.
ಮಾ. 10 ಸೋಮವಾರ ರಾತ್ರಿ ಬ್ಯಾಂಕಿನಲ್ಲಿ ಕಳ್ಳತನಕ್ಕೆ ಪ್ರಯತ್ನಿಸಲಾಗಿತ್ತು. ಬ್ಯಾಂಕಿನ ವ್ಯವಸ್ಥಾಪಕ ಗಂಗನಗೌಡರ್ ಅವರೊಂದಿಗೆ ಮಾತುಕತೆ ನಡೆಸಿದ ಐಜಿಪಿ ಘಟನೆಯ ಬಗ್ಗೆ ವಿವರಣೆ ಪಡೆದರು.
ಪೊಲೀಸ್ ಇಲಾಖೆಯು ಈ ಕಳ್ಳತನ ಪ್ರಯತ್ನದ ಘಟನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ ಎಂದರು.
ಯಾದಗಿರಿ ಡಿವೈಎಸ್‌ಪಿ ಆರ್.ಬಿ. ಬಸರಗಿ, ಹುಣಸಗಿ ಸಿಪಿಐ ವಿಜಯಕುಮಾರ್ ಮುರಗುಂಡಿ ಹಾಗೂ ಹುಣಸಗಿ ಪಿಎಸ್‌ಐ ಮಂಜುನಾಥ ಶಿರಿವೇರಿ ಇತರ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement