ಮಳೆ ಹಾನಿ; ವೈಜ್ಞಾನಿಕ ಪರಿಹಾರ ನೀಡಲು ಆಗ್ರಹ
ಶಹಾಪುರ: ಮೂರು ದಿನಗಳ ಹಿಂದೆ ಜಿಲ್ಲಾದ್ಯಂತ ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾದ ಅಪಾರ ಪ್ರಮಾಣದ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕೆಂದು ಕರುನಾಡ ಸೇನೆ ಜಿಲ್ಲಾಧ್ಯಕ್ಷ ಗುರುರಾಜ ಯಕ್ಷಿಂತಿ ಆಗ್ರಹಿಸಿದ್ದಾರೆ.
ಶಹಾಪುರ ಪಟ್ಟಣದಲ್ಲಿ ಕರುನಾಡ ಸೇನೆಯ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಾಲೂಕು ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಳೆ ನಾಶ; ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಜೋಳ, ಕುಸುಬೆ, ಬತ್ತ ಹಾಗೂ ಶೇಂಗಾ ಮತ್ತು ತೋಟಗಾರಿಕಾ ಬೆಳಗಳು ಸಂಪೂರ್ಣ ನಾಶವಾಗಿವೆ. ಗ್ರಾಮೀಣ ಭಾಗದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬ ಅಳುಕು ರೈತರನ್ನ ಕಾಡುತ್ತಿದೆ ಎಂದು ಸಂಘಟನೆಯ ಸದಸ್ಯರು ಹರಿಹಾಯ್ದರು.
ಕೂಡಲೇ ಕೃಷಿ ಕಾರ್ಮಿಕ ಕುಟುಂಬಗಳ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ಶೀಘ್ರದಲ್ಲಿ ಪರಿಹಾರ ನೀಡಲು ಮುಂದಾಗಿ ಆರ್ಥಿಕ ನೆರವಿನೊಂದಿಗೆ ಪರಿಹಾರ ನೀಡಬೇಕೆಂದು ಕರುನಾಡ ಸೇನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸುನೀಲ ದೊರೆ, ಶ್ರೀನಿವಾಸ ರಾಠೋಡ, ಪ್ರಕಾಶ ಭೀರಳಕರ್ ನಿಗರಾಜ ಗುಂಟನೂರ, ಪರಶುರಾಮ ಹೈಯಾಳ್ಕರ, ಭೀಮರಾಯ ಮಳ್ಳಳ್ಳಿ, ಬಸವರಾಜ ಕಾಮ, ನಾಗರಾಜ ಬಿರೆದಾರ, ಸಚಿನ್ ಹೇರೂರ, ಸತ್ಯ ಹೈಯಾಳ ಇತರರು ಇದ್ದರು.