ಶಿವಾನುಭವ ಚಿಂತನಗೋಷ್ಠಿ ಅಗತ್ಯ
ಕ.ಪ್ರ. ವಾರ್ತೆ ಹುಣಸಗಿ ಮಾ.15
ಇಂದಿನ ಒತ್ತಡದ ಜೀವನದಲ್ಲಿ ಜನರಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಯುವಕರಿಗಾಗಿ ಶಿವಾನುಭವ ಚಿಂತನ ಗೋಷ್ಠಿಗಳನ್ನು ನಡೆಸುವುದರಿಂದ ಅವರು ದಾರಿ ತಪ್ಪದೇ ಸನ್ಮಾರ್ಗದಲ್ಲಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಬಿ. ಕೆ. ಶಿವಲೀಲಾ ಅಕ್ಕ ನುಡಿದರು.
ಪಟ್ಟಣದ ಬಾಪುಗೌಡ ಪಾಟೀಲ ಸದಬ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿ.ವಿ, ಮೊಬೈಲ್ಗಳ ವ್ಯಾಮೋಹದಿಂದಾಗಿ ಎಲ್ಲರೂ ಶಾಂತಿ, ನೆಮ್ಮದಿಗಾಗಿ ಪರಿತಪಿಸುವಂತಾಗಿದೆ, ಯುವಕರಲ್ಲಿ ಹಿರಿಯರ ಬಗ್ಗೆ ಪೂಜನೀಯ ಭಾವನೆಗಳು ಕಡಿಮೆಯಾಗುತ್ತಿವೆ. ಭಾರತದೇಶ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ವಿದೇಶಿಯರು ಇಂದು ಭಾರತಕ್ಕೆ ಬಂದು ಭಾರತದ ಆಧ್ಯಾತ್ಮದ ತತ್ವಗಳನ್ನು ಅಳವಡಿಸಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಮುಖ್ಯ ಶಿಕ್ಷಕಿ ಅಮೃತಬಾಯಿ ಜಹಗೀರದಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
--