ಕೇಂದ್ರೀಯ ಹೋಮಿಯೋಪತಿ ಪರಿಷತ್‌ಗೆ ರಾಜ್ಯದ ಡಾ. ಎ.ಎಲ್.ಪಾಟೀಲ್ ನೇಮಕ
ಗುಲ್ಬರ್ಗ: ಉತ್ತರ ಕರ್ನಾಟಕದ ಬಾಗಲಕೋಟೆ ಮೂಲದ, ಸದ್ಯ ಬೆಂಗಳೂರಲ್ಲಿರುವ ಸರ್ಕಾರಿ ಹೋಮಿಯೋಪತಿ ಮೆಡಿಕಲ್ ಕಾಲೇಜಲ್ಲಿ ಪ್ರಾರ್ಯರಾಗಿರುವ ಡಾ. ಎ.ಎಲ್.ಪಾಟೀಲರು ಮುಂದಿನ 5 ವರ್ಷಗಳ ಅವಧಿಗೆ ಪ್ರತಿಷ್ಠತ ಕೇಂದ್ರೀಯ ಹೋಮಿಯೋಪತಿ ಪರಿಷತ್‌ಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
ಬಾಗಲಕೋಟೆ ಮೂಲವಾದರೂ ಇವರು ಬೆಳಗಾವಿ, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿಯೂ ಹೋಮಿಯೋಪತಿ ರಂಗದಲ್ಲಿ ಸೇವೆ ಸಲ್ಲಿಸಿ ಚಿರಪರಿಚಿತರು. ಹೀಗಾಗಿ ಇವರ ಈ ನೇಮಕಾತಿ ಉ- ಕ ಭಾಗದಲ್ಲಿನ ಹೋಮಿಯೋಪತಿ ಶಿಕ್ಷಣ ಹಾಗೂ ವೈದ್ಯ ಕ್ಷೇತ್ರದಲ್ಲಿ ಸಂತಸ ಮೂಡಿಸಿದೆ. ಕಳೆದ ಫೆಬ್ರವರಿ ತಿಂಗಳ 28 ರಿಂದಲೇ ಈ ನೇಮಕಾತಿ ಜಾರಿಗೊಂಡಿದ್ದು ಮುಂದಿನ 5 ವರ್ಷಗಳ ಅವಧಿವರೆಗೂ ಇದು ಮುಂದುವರಿಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ (ಆಯುಷ್ ಇಲಾಖೆ), ಭಾರತ ಸರ್ಕಾರ, ನವದೆಹಲಿ ಇವರ ಗೆಜೆಟ್ ಅಧಿಸೂಚನೆಯಲ್ಲಿ ಈ ನೇಮಕಾತಿ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.