ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

56 ಸಾವಿರ ಮೌಲ್ಯದ ಮದ್ಯ ವಶ

Rashmi Kasaragodu
Updated On : 19 Mar 2014, 11:24 am


ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮದಿಂದ ಚಿಂತಕುಂಟಾ ಗ್ರಾಮಕ್ಕೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಬೈಕ್ ಮೇಲೆ ಸಾಗಿಸುತ್ತಿದ್ದಾಗ ಹಲಚೇರ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷಕುಮಾರ ತಿಪ್ಪಣ್ಣ ಬುಳ್ಳ ಅವರನ್ನು ಬಂಧಿಸಿ 56 ಸಾವಿರ ಮೌಲ್ಯದ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿಂಚೋಳಿ ಅಬಕಾರಿ ಉಪನಿರೀಕ್ಷಕ ಮಂಜುನಾಥ ಮೇಲಗಿರಿ ತಿಳಿಸಿದ್ದಾರೆ.
 ಕೋಡ್ಲಿ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ಬೈಕ್‌ನಲ್ಲಿ 17,280 ಲೀಟರ್ ಯುಎಸ್ ವಿಸ್ಕಿ 96 ಬಾಟಲ್‌ಗಳನ್ನು ಚಿಂತಕುಂಟಾ ಗ್ರಾಮಕ್ಕೆ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ  ಆರೋಪಿ ಸಂತೋಷಕುಮಾರ ಬುಳ್ಳ ಅವರನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಮೇಲಗಿರಿ ತಿಳಿಸಿದ್ದಾರೆ, ಅಬಕಾರಿ ಸಿಬ್ಬಂದಿಗಳಾದ ಲಕ್ಷ್ಮಣ ರಾಠೋಡ್, ಸಲಾವುದ್ದೀನ್, ಮೇಘು, ರವಿಕುಮಾರ, ಶಂಕರೆಪ್ಪಾ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement