ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಬ್ಬಿನ ಬಾಕಿ ಹಣಕ್ಕಾಗಿ ಡಿಸಿ ಕಚೇರಿಗೆ ಬೀಗ

Rashmi Kasaragodu
Updated On : 19 Mar 2014, 11:24 am

ಕ.ಪ್ರ. ವಾರ್ತೆ  ಬೀದರ್  ಮಾ.18
ಕಬ್ಬಿನ ಬಾಕಿ ಹಣ ಪಾವತಿಗೆ ಒತ್ತಾಯಿಸಿ ರೈತ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಸುಮಾರು 45ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ ಘಟನೆ ಜರುಗಿತು.
  ಕಬ್ಬಿನ ಬಾಕಿ ಹಣ ಪಾವತಿ ಕುರಿತಂತೆ ಮಂಗಳವಾರ ಬೆಳಗ್ಗೆ ರೈತ ಸಂಘದ ಪ್ರಮುಖರು ಜಿಲ್ಲಾಧಿಕಾರಿಗಳ ಭೇಟಿಗಾಗಿ ಕಚೇರಿಗೆ ಕಾಯ್ದು ಕುಳಿತಿದ್ದರೂ ಜಿಲ್ಲಾಧಿಕಾರಿಗಳು ಬಾರದ ಕಾರಣ ಕೆರಳಿದ ರೈತರು, ಏಕಾಏಕಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿಯಲು ಮುಂದಾದರು.
  ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಈಗಲಾದರೂ ಸರ್ಕಾರ ಎಚ್ಚೆತ್ತು ಕಬ್ಬಿನ ಹಣವನ್ನು ಶೀಘ್ರವೇ ಪಾವತಿಸಲು ಈ ಮುನ್ನ ಜಿಲ್ಲಾಧಿಕಾರಿಗಳು ಮಾತು ಕೊಟ್ಟಂತೆ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಸಂಘದಿಂದ ಮಾ.22ರಿಂದ ಜಿಲ್ಲಾದ್ಯಂತ ಗ್ರಾಮಗಳಲ್ಲಿ ಬಂದ್ ಆಚರಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿಗೆ ಸ್ಪಂದಿಸದ ಜಿಲ್ಲಾಧಿಕಾರಿ: ಈ ಹಿಂದೆಯೂ ಜಿಲ್ಲಾಧಿಕಾರಿಗಳಿಗೆ ಸಂಪರ್ಕಿಸಲು ಪ್ರಯತ್ನಿಸಿ ಯಾವುದೇ ರೀತಿಯ ಸ್ಪಂದನೆ ದೊರೆಯದಿರುವುದರಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದು ಅನಿವಾರ್ಯವಾಯಿತು ಎಂದರು.
  ಚಳವಳಿಯಲ್ಲಿ ಆಡಳಿತಾಧಿಕಾರಿಗಳಿಗೆ ಮತ್ತು ಸ್ಪರ್ಧೆಯ ಜನಪ್ರತಿನಿಧಿಗಳಿಗೆ ನಿಬಂರ್ಧ ಹೇರಲಾಗುವುದು.. ಇದಕ್ಕೆಲ್ಲ ಸರ್ಕಾರವೇ ಜವಾಬ್ದಾರಿ. ಮುಂಬರುವ ದಿನಗಳಲ್ಲಿ ಅಹಿತಕರ ಘಟನೆಗಳು ಜರುಗದಂತೆ ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ರೈತರ ಕಬ್ಬಿನ ಹಣ ಶೀಘ್ರ ಪಾವತಿಗೆ ವ್ಯವಸ್ಥೆ ಮಾಡಬೇಕೆಂದು ಸಂಘ ಒತ್ತಾಯಿಸಿದೆ.
 ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ್, ಸಿದ್ರಾಮಪ್ಪ ಆಣದೂರೆ, ಶ್ರೀಮಂತ ಬಿರಾದಾರ, ಪ್ರಕಾಶ ಬಾವಗೆ, ಸತೀಷ ನನ್ನೂರೆ, ಸಿದ್ದಪ್ಪ ಸಣಮಣಿ, ಸುರೇಶ ಚನಶೆಟ್ಟಿ, ಸುಭಾಷ ರಗಟೆ, ಮೈನೋದ್ದಿನ್, ಶೇಷರಾವ ಬಿರಾದಾರ, ಖಾಸೀಮ್ ಇತರರು ಪಾಲ್ಗೊಂಡಿದ್ದರು.


ಡಿಸಿ ಭರವಸೆ ಹುಸಿ
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಕಬ್ಬಿನ ಹಣ ಪಾವತಿಗೆ ಒತ್ತಾಯಿಸಿ ಮಾ.3 ಮತ್ತು 4 ರಂದು ಹೆದ್ದಾರಿ ತಡೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕ ರಾಜಶೇಖರ ಪಾಟೀಲ್ ಅವರು ಭೇಟಿ ನೀಡಿ ಪ್ರತಿ ಟನ್ ಕಬ್ಬಿಗೆ ಮುಂಗಡವಾಗಿ 1,800 ಹಣವನ್ನು ಕಾರ್ಖಾನೆಗಳಿಂದ 3 ದಿನದಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ ನಂತರ ರಸ್ತೆ ತಡೆ ಚಳವಳಿಯನ್ನು ಹಿಂಪಡೆಯಲಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement