ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಳ್ಳಿ: ವಿಶ್ವನಾಥ ರಡ್ಡಿ
ಯಾದಗಿರಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಹಿರಿಯ ಸಾಹಿತಿ ವಿಶ್ವನಾಥರಡ್ಡಿ ಗೊಂದೆಡಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಂದ್ರಶೇಖರ ವಿದ್ಯಾಸಂಸ್ಥೆ ವತಿಯಿಂದ ಗಾಂಧಿನಗರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ಸೇವೆಯಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಿಯ ಪ್ರಜ್ಞೆ, ಮತ್ತು ಸಮಯ ಪ್ರಜ್ಞೆ ಮೂಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕ ಎಸ್.ಎಸ್. ನಾಯಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಪಡೆದುಕೊಳ್ಳದೆ ಸಮಾಜದ ಸುಧಾರಣೆಗಾಗಿ ತಮ್ಮ ಶಿಕ್ಷಣವನ್ನು ಬಳಸಿ, ಹೆಸರು ಕೀರ್ತಿ ಗಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರಘುನಾಥರಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಆರ್.ಎಂ. ಕೊನಿಮನಿ, ರಾಷ್ಟ್ರೀಯ ಸೇವಾ ಯೋಜನೆಯ ರಾಘುವೇಂದ್ರರಡ್ಡಿ, ಡಾ. ಭೀಮಾರಾಯ ಲಿಂಗೇರಿ, ಶೋಭ ಹಿರೇಮಠ, ಶ್ರೀನಿವಾಸ, ಮಾರ್ಥಂಡಪ್ಪ, ಶಿವು ಎಸ್.ಕೆ. ಲಿಂಗರಾಜ, ಹಾಗೂ ವಿದ್ಯಾರ್ಥಿಗಳೂ ಇದ್ದರು.