ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಶೋಧನೆಯಿಂದ ನಿರುದ್ಯೋಗ ದೂರ

Rashmi Kasaragodu
Updated On : 19 Mar 2014, 11:26 am

ಕನ್ನಡಪ್ರಭ ವಾರ್ತೆ  ಭಾಲ್ಕಿ  ಮಾ.18
ಸರ್ವಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಶೋಧನೆಯನ್ನು ಒಂದು ಸವಾಲಾಗಿ ತೆಗೆದುಕೊಂಡು ಧೈರ್ಯವಾಗಿ ಮುಂದುವರೆದರೆ, ನಿರುದ್ಯೋಗವನ್ನು ಕಡಿಮೆ ಮಾಡಬಹುದು ಎಂದು ನಾಂದೇಡಿನ ಎಸ್.ಜಿ.ಜಿ.ಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ.ಎಂ. ಪಾತ್ರೆ ತಿಳಿಸಿದರು.
  ಪಟ್ಟಣದ ಭೀಮಣ್ಣಾ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಕೆಮಿಕಲ್ ವಿಭಾಗವು ಎರಡು ದಿವಸಗಳ ರಾಷ್ಟ್ರಿಯ ಸಂಶೋಧನಾ ಪ್ರಣಾಲಿ ವಿಜ್ಞಾನ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಶೇ. 20 ಎಂಜಿನೀಯರಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
  ಇಂದಿನ ಪೈಪೋಟಿ ಯುಗದಲ್ಲಿ, ಕುರಿ ಹಿಂದೆ ಓಡುವ ಕುರಿಯಾಗದೆ, ನಿಶ್ಚಲ ಛಲ, ಪ್ರಯತ್ನ, ಆತ್ಮವಿಶ್ವಾಸವನ್ನಿಟ್ಟುಕೊಂಡು ನಾಯಕತ್ವದ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಬೇಕೆಂದು ಹೇಳಿದರು.
ಸಂಶೋಧನೆ ಮಹತ್ವ: ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಾಂದೇಡಿನ ಎಸ್.ಜಿ.ಜಿ.ಎಸ್. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಮಂಠಾಳಕರ್, ಆಗಮಿಸಿ ಸಂಶೋಧನೆ ಏಕೆ ಬೇಕೆಂದು ಎಲ್ಲರಿಗೂ ಮನದಟ್ಟವಾಗುವ ಹಾಗೆ ತಿಳಿಸಿದರು.
ನಾಂದೇಡಿನ ಎಸ್‌ಜಿಜಿಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸುಹಾಸ್ ಗಜ್ರೆ, ಪ್ರಾಧ್ಯಾಪಕರು, ಗೌರವ ಅತಿಥಿಗಳಾಗಿ ಆಗಮಿಸಿ ಸಂಶೋಧನಾ ಪ್ರಬಂಧಗಳನ್ನು ಹೇಗೆ ಬರೆಯಬೇಕು ಎಂದು ತಿಳಿಸಿಕೊಟ್ಟರು.
ಲಾಭ ಪಡೆಯಿರಿ: ಪ್ರಾಚಾರ್ಯ ಡಾ. ಬಿಪಿನ್ ಬಿಹಾರಿ ಲಾಲ್ ಅಧ್ಯಕ್ಷೀಯ ಭಾಷಣ ಮಾಡಿ, ಎಲ್ಲರೂ ಈ ಕಾರ್ಯಾಗಾರದ ಲಾಭ ತೆಗೆದುಕೊಳ್ಳಬೇಕಾಗಿ ಕರೆ ಕೊಟ್ಟರು. ಕೆಮಿಕಲ್ ವಿಭಾಗದ ಸಿಬ್ಬಂದಿ ಕೋಟೇಶ್ವರ, ಪುರುಷೋತ್ತಮ, ಸುಧಾಕರ, ಶಹಾದುಲ್ಲಾ, ಎಂಬಿಎ ಮುಖ್ಯಸ್ಥ ಗಿರಿಧಾರಿ ತಿವಾರಿ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಡಾ. ಸಂಜಯ ಗೌರೆ, ಪ್ರೊ. ಎಸ್.ವಿ. ಬಿರಾದರ ಮುಂತಾದವರು ಹಾಜರಿದ್ದರು.
 ಸುನೀಲ ಕೆ. ಸಂಗಮೆ ಕಾರ್ಯಕ್ರಮ ನಿರೂಪಿಸಿದರು, ಕೆಮಿಕಲ್ ವಿಭಾಗದ ಮುಖ್ಯಸ್ಥ ಎಂ.ಎ. ದೇವಣಿ ಸ್ವಾಗತಿಸಿ, ಸಂಯೋಜನ ಕಾರ್ಯದರ್ಶಿ ಬಿ.ಎಸ್. ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement