ಸಾಧಕರ ಜೀವನ ಮೌಲ್ಯಅಳವಡಿಸಿಕೊಳ್ಳಿ
ಚಿತ್ತಾಪುರ: ಮಕ್ಕಳಿಗೆ ಸ್ವಾಮಿ ವಿವೇಕಾನಂದ, ಡಾ. ರಾಧಕೃಷ್ಣನ್, ಲಾಲಾ ಲಜಪತರಾಯ್, ಡಾ. ಅಬ್ದುಲ್ ಕಲಾಂ, ಭಗತ್ಸಿಂಗ್ ಅವರಂಥ ಸಾಧಕರ ಜೀವನ ಮೌಲ್ಯಗಳನ್ನು ಅನುಕರಣೆ ಮಡುವುದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಡಾ. ಶಾಂತಸೋಮನಾಥ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ತೆಂಗಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ, ಭಾವ ಸಮ್ಮಿಲನ ಹಾಗೂ 10ನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಹಂ ಬಿಟ್ಟುಬಿಡಿ: ಮಕ್ಕಳು ಒಳಮನಸ್ಸಿನ ಮಾತು ಮಾತ್ರ ಕೇಳಬೇಕು. ಹೆಚ್ಚಿನ ಆಸೆ ಆಮಿಷಗಳಿಗೆ ಕಡಿವಾಣ ಹಾಕಿ ದೊಡ್ಡ ಮನಸ್ಸು ಹಾಗೂ ನಾನು ಎಂಬ ಅಹಂ ಬಿಟ್ಟಾಗ ಮಾತ್ರ ಒಂದು ಮಗು ರಾಷ್ಟ್ರದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ತಾಪಂ ಮಾಜಿ ಅಧ್ಯಕ್ಷ ಪಂಡಿತರಾವ ಭೇರನ್ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ರೇವಣಸಿದ್ದಪ್ಪ ದುಕಾನ್, ಪರಮೇಶ್ವರ ತೆಂಗಳಿ ಮಾತನಾಡಿದರು. ನಿತ್ಯಾನಂದ ಬಂಡಿ ಅವರು ವೀವೇಕಾನಂದರ ವಿಚಾರಧಾರೆಯ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಗುರು ರವೀಂದ್ರ ರೆಡ್ಡಿ ಪ್ರಾಸ್ತಾವಿಕವಾಗಿ ಹಾಗೂ ವಾರ್ಷಿಕ ವರದಿ ವಾಚನ ಮಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಪತ್ರಕರ್ತ ಪ್ರಶಾಂತ ಕಡ್ಲಿ, ಉಪನ್ಯಾಸಕಿ ಜಯಶ್ರೀ, ಎಸ್ಡಿಎಂಸಿ ಅಧ್ಯಕ್ಷ ಶರಣಯ್ಯ ಕುಡಕಿ ಹಾಗೂ ಶಾಲಾ ಶಿಕ್ಷಕರು, ಗ್ರಾಮಸ್ಥರು, ಮಕ್ಕಳು ಮತ್ತು ಪಾಲಕರು ಇದ್ದರು. ಬಿಲ್ಕಿಸ್ ಬಾನು ಸಂಗಡಿಗರು ಪ್ರಾರ್ಥಿಸಿದರು. ಶಾಮರಾಯ ಪೂಜಾರಿ ಸ್ವಾಗತಿಸಿದರು. ನರಸಪ್ಪ ದಸ್ತಾ ನಿರೂಪಿಸಿದರು. ಅಶೋಕ ಮಿಸ್ಕಿನ ವಂದಿಸಿದರು.