ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಲ್ಬರ್ಗದಲ್ಲಿಂದು.....

Rashmi Kasaragodu
Updated On : 20 Mar 2014, 12:35 pm

ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧೀಜಿ ಸಭಾಂಗಣ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆ ಮತ್ತು ಸಮಾಜ ವಿಷಯ ಕುರಿತು ವಿಚಾರ ಸಂಕಿರಣ, ಬೆಳಗ್ಗೆ 11 ಗಂಟೆಗೆ. ಜೆಸ್ಕಾಂ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪಲ್ಲವಿ ಅಕುರಾತಿ ಕಾರ್ಯಕ್ರಮ ಉದ್ಘಾಟಿಸುವರು. ಕುಲಪತಿ ಪ್ರೊ. ಈ.ಟಿ ಪುಟ್ಟಯ್ಯ ಅಧ್ಯಕ್ಷತೆ ವಹಿಸುವರು. ಡಾ. ಇಂದುಮತಿ ಪಿ ಪಾಟೀಲ್, ಡಾ. ವಿಲಾಸವತಿ ಖೂಬಾ, ಡಾ. ಉಷಾ ಲಾಹೋಟಿ, ಕೆ. ನೀಲಾ ಹಾಗೂ ಸಂಗೀತ ಕಟ್ಟಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
          
ಶೃಂಗೇರಿಯ ಶಾರದಾ ಪೀಠ ಶಂಕರಾಚಾರ್ಯ ಮಹಾಸಂಸ್ಥಾನ ಪೀಠಾಧಿಪತಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿ ಗುಲ್ಬರ್ಗಕ್ಕೆ ಆಗಮನ. ಸಾಯಂಕಾಲ 4.30 ಗಂಟೆಗೆ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶ್ರೀಗಳಿಗೆ ಭವ್ಯ ಸ್ವಾಗತ, ಶೋಭಾಯಾತ್ರೆ, ಸಾಯಂಕಾಲ 6.30 ಗಂಟೆಗೆ ಶಂಕರ ಮಠದಲ್ಲಿ ಶ್ರೀಗಳ ಧೂಳಿ ಪಾದಪೂಜೆ, ಪೌರಸನ್ಮಾನ, ಅಭಿನಂದನಾ ಪತ್ರ ಸಲ್ಲಿಕೆ, ಸ್ಮರಣ ಸಂಚಿಕೆ ಬಿಡುಗಡೆ, ರಾತ್ರಿ 9 ಗಂಟೆಗೆ ಚಂದ್ರಮೌಳೇಶ್ವರ ಮಹಾಪೂಜೆ ನಡೆಯಲಿದೆ.
          
ರೋಟರಿ ಕ್ಲಬ್, ಗುಲ್ಬರ್ಗ 60 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಸಾಯಂಕಾಲ 6 ಗಂಟೆಗೆ ಪಾಲ್ ಹ್ಯಾರೀಸ್ ಸಭಾಂಗಣದಲ್ಲಿ ಷಷ್ಠ್ಯಬ್ದ ಸಮಾರಂಭ. ಸರ್ವೋಚ್ಛ ನ್ಯಾಯಾಲಯ ನಿವೃತ್ತ  ನ್ಯಾಯಾಧೀಶ ಶಿವರಾಜ ಪಾಟೀಲ್ ಕಾರ್ಯಕ್ರಮ ಉದ್ಘಾಟನೆ. ರೋ. ಆರ್. ಗೋಪಿನಾಥ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾಜಿ ರಾಜ್ಯಪಾಲ ಮಣಿಪಾಲ ಶಾಹಾ, ಗೌತಮ ಜಹಾಗೀರದಾರ, ಮಾಣಿಕ ಪವಾರ, ಮಾರುತಿ ಪವಾರ ಉಪಸ್ಥಿತರಿರುವರು.
          
ಯುನಿವರ್ಸಲ್ ಕನ್ಸರ್ನ್ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಧ್ಯಾಹ್ನ 4.30ಗಂಟೆಗೆ ಕನ್ನಡ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ. ಗುಲ್ಬರ್ಗ ಬಸವ ಸಮಿತಿ ಅಧ್ಯಕ್ಷ ಡಾ. ವಿಲಾಸರಾವ್ ಎಸ್. ಖೂಬಾ ಕಾರ್ಯಕ್ರಮ ಉದ್ಘಾಟಿಸುವರು. ವಾದಿರಾಜ ವ್ಯಾಸಮುದ್ರ, ಆಳಂದ ಪುರಸಭೆ ಸಿಎಒ ಡಾ. ನಾಗರತ್ನ ಬಿ. ದೇಶಮಾನ್ಯೆ, ಭೀಮಾಶಂಕರ ತದ್ದೆವಾಡಿ, ಮಹಿಪಾಲರೆಡ್ಡಿ ಮುನ್ನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಗೌರವ ಅಧ್ಯಕ್ಷ ಕೆ. ಪ್ರಕಾಶ ಅಧ್ಯಕ್ಷತೆ ವಹಿಸುವರು. ಎಸ್.ಆರ್. ಮಣ್ಣೂರ ವಿಷಯ ಮಂಡನೆ ಮಾಡಲಿದ್ದಾರೆ.
          
ನಗರದ ಜಗತ್ ವೃತ್ತ ಜಿಪಂ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ವಿ.ಎನ್. ಕಾಗಲಕರ್ ಪ್ರಶಸ್ತಿ ಪ್ರದಾನ ಸಮಾರಂಭ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜನೆ. ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರಿಗೆ ಪ್ರಶಸ್ತಿ ಪ್ರದಾನ. ಕೇಂದ್ರೀಯ ವಿವಿ ಕುಲಪತಿ (ಪ್ರಭಾರ) ಎಂ.ಎನ್. ಸುಧೀಂದ್ರರಾವ್ ಅವರಿಂದ ಚಾಲನೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ. ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಭವಾನಿಸಿಂಗ್ ಠಾಕೂರ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಮಾಲಗಾರ, ಉಪಾಧ್ಯಕ್ಷ ದೇವೇಂದ್ರಪ್ಪ ಕಪನೂರ್, ವೀರೇಂದ್ರ ಕೊಲ್ಲೂರ, ಕಾರ್ಯದರ್ಶಿ ವಿ.ವಿ. ದೇಸಾಯಿ, ಖಜಾಂಚಿ ವೀರಣ್ಣಗೌಡ ಪಾಟೀಲ್ ಮತ್ತಿತರರ ಉಪಸ್ಥಿತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement