ಪ್ರತಿಭಾ ಪರೀಕ್ಷೆ ರಾಜ್ಯ, ರಾಷ್ಟ್ರಕ್ಕೆ ಪ್ರಥಮ
ಶಹಾಬಾದ್: ಸಮೀಪದ ಸಿದ್ಧಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿಭಾ ವಿಜ್ಞಾನ ದಾವಣಗೆರೆ ವತಿಯಿಂದ ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪದಕ ಪ್ರಶಸ್ತಿ ಪತ್ರಗಳನ್ನು ಇತ್ತೀಚೆಗೆ ನೀಡಲಾಯಿತು. ಗಣಿತ ವಿಷಯದಲ್ಲಿ ಕೃಷ್ಣ ತಂದೆ ನಿಂಗಣ್ಣ ರಾಷ್ಟ್ರಮಟ್ಟಕ್ಕೆ ಪ್ರಥಮ ಸ್ಥಾನ, ಬೀರಲಿಂಗ ತಂದೆ ಮಹಾದೇವಪ್ಪ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ, ಲಕ್ಷ್ಮೀ ತಂದೆ ಬಸಲಿಂಗಪ್ಪ ಜಿಲ್ಲಾಮಟ್ಟಕ್ಕೆ ಪ್ರಥಮ ಸ್ಥಾನ ಆನಂತ ತಿಪ್ಪಣ್ಣ ರಾಜ್ಯ ಮಟ್ಟಕ್ಕೆ 5ನೇ ರ್ಯಾಂಕ್ ಪಡೆದಿದ್ದಾರೆ. ಇಂಗ್ಲಿಷ್‌ನಲ್ಲಿ ಕಾಶಿನಾಥ ತಂದೆ ದುರ್ಗಪ್ಪ ರಾಷ್ಟ್ರಮಟ್ಟಕ್ಕೆ 5ನೇ ರ್ಯಾಂಕ್, ಚೇತನ ತಂದೆ ಕಾಶಿನಾಥ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ, ಸಿದ್ರಾಮ ತಂದೆ ಲಕ್ಷ್ಮಣ ಜಿಲ್ಲಾಮಟ್ಟಕ್ಕೆ ಪ್ರಥಮ ಸ್ಥಾನ ಮತ್ತೆ ಹಲವಾರು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.