ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾಸಾಶನಕ್ಕೆ ಕತ್ತರಿ ಪ್ರಯೋಗ; ಆಕ್ರೋಶ

Rashmi Kasaragodu
Updated On : 20 Mar 2014, 12:36 pm

ಗುಲ್ಬರ್ಗ: ಇಲ್ಲಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬುಧವಾರ ಮುಖ್ಯರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ಮೆರವಣಿಗೆಯ ಮುಖಾಂತರ ತಹಸೀಲ್ದಾರ್ ಕಚೇರಿಗೆ ಬಂದು ಮಹಿಳೆಯರ ಮಾಸಾಶನ ಸಮಸ್ಯೆ ಸೇರಿದಂತೆ ಹಲವು ಸಂಗತಿಗಳನ್ನು ಪಟ್ಟಿ ಮಾಡಿ ತಕ್ಷಣ ಈಡೇರಿಸುವಂತೆ ಆಗ್ರಹಿಸಿದರು.
  ಒಂಟಿ ಮಹಿಳೆಯರಿಗೆ ಮಾಸಾಶನ ಕೊಡಬೇಕು. ಈಗಾಗಲೇ ಸಲ್ಲಿಸಲಾದ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಮಾಸಾಶನ ಮಂಜೂರು ಮಾಡಬೇಕು, ಕಡುಬಡವ ವೃದ್ಧರಿಗೆ ವಿಧವೆಯರಿಗೆ ಈ ಹಿಂದೆ ಬರುತ್ತಿರುವ ಮಾಸಾಶನವನ್ನು ಅಕಾರಣವಾಗಿ ತಡೆಹಿಡಿಯಲಾಗಿದೆ. ಬಹಳಷ್ಟು ಜನರಿಗೆ ಬರುವ ಮಾಸಾಶನವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಬಡತನದಲ್ಲಿರುವ ಇವರಿಗೆ ಇನ್ನಷ್ಟು ಕಷ್ಟಗಳು ಎದುರಾಗುತ್ತಿವೆ. ಕೂಡಲೇ ಇವರಿಗೆ ಮಾಸಾಶನವನ್ನು ಪುನಃ ದೊರೆಯುವಂತೆ ಮಾಡಬೇಕು.
  ಸರ್ಕಾಕಾರದಿಂದ ಘೋಷಣೆಯಾದಂತೆ ಒಂಟಿ ಮಹಿಳೆಯರ ಸಮೀಕ್ಷೆ ನಡೆದು ಅವರಿಗೆ ಮಾಸಾಶನ ಮಂಜೂರು ಮಾಡುವ ಕ್ರಮ ಕೈಗೊಳ್ಳಬೇಕು, ಅನಕ್ಷರಸ್ಥ, ಗ್ರಾಮೀಣ ಮತ್ತು ಬಡ ಮಹಿಳೆಯರಿಗೆ ವಂಚಿಸುವ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ದೊರಕುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಬೇಕು. ಇದಕ್ಕಾಗಿ ತಹಸೀಲ್ದಾರ್ ಕಚೇರಿಯಲ್ಲಿ ಜನಸ್ನೇಹಿ ಕೇಂದ್ರ ತೆರೆದು ಸಾಮಾನ್ಯ ಜನರಿಗೆ ನೆರವು ಒದಗಿಸಬೇಕು ಎಂಬ ಪ್ರಮುಖ ಹಕ್ಕೊತ್ತಾಯಗಳೊಂದಿಗೆ ಧರಣಿಯಲ್ಲಿ ಅನೇಕರು ಭಾಗವಹಿಸಿ ತಹಸೀಲ್ದಾರ್ ಕಚೇರಿಗೆ ಘೇರಾವ್ ಹಾಕಿ ಗಮನ ಸೆಳೆದರು.ಜನವಾದಿ
ಮಹಿಳಾ ಸಂಘದ ನೀಲಾ ರಾಜ್ಯ ಪ್ರಮುಖರಾದ ಕೋದಂಡರಾಮಯ್ಯ ಮಾರ್ಗದರ್ಶನದಲ್ಲಿ ನಡೆದ ಮೆರವಣಿಗೆಯಲ್ಲಿ ಚಂದಮ್ಮ ಗೋಳಾ,  ಜಗದೇವಿ ನೂಲಕರ್ ನೂರಾರು ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement