ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜಕೀಯ ಸೇರಲ್ಲ, ಪ್ರಚಾರಕ್ಕೂ ಹೋಗಲ್ಲ

Rashmi Kasaragodu
Updated On : 25 Mar 2014, 1:48 am


ಗುಲ್ಬರ್ಗ: ಡಾ.ರಾಜ್ ಕುಟುಂಬ ರಾಜಕೀಯಕ್ಕೆ ಬಂದಿದ್ದು, ಅವರ ವೈಯಕ್ತಿಕ ನಿರ್ಧಾರ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ವಿನಹ ನಾನು ರಾಜಕೀಯಕ್ಕೆ ಸೇರೊದಿಲ್ಲ. ಚುನಾವಣೆ ಪ್ರಚಾರಕ್ಕೂ ಹೋಗುವುದಿಲ್ಲವೆಂದು ಚಿತ್ರನಟ ದುನಿಯಾ ವಿಜಯ್ ತಮ್ಮ ನಿಲುವು ಸ್ಪಷ್ಟಪಡಿಸಿದರು.
ನಗರದಲ್ಲಿ ದಲಿತ ಸೇನೆ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಕಾವು ಹೆಚ್ಚುತಿದ್ದು, ಪ್ರಚಾರಕ್ಕಾಗಿ ಆಹ್ವಾನಗಳು ಬಂದಿದ್ದವು ಎಂದರು.
ರಾಜಕೀಯ ಎಂಬುದು ಬಲು ಕಷ್ಟ. ಇಲ್ಲಿ ಪಾಲಿಕೆ, ಗ್ರಾಮ, ಜಿಲ್ಲಾ ರಾಜ್ಯ ಮಟ್ಟದಿಂದ ಬೆಳೆಯಬೇಕು. ಆರಂಭದಿಂದ ಕೊನೆಯವರೆಗೂ ಸೇವಾ ಮನೋಭಾವನೆ ಇದ್ದರೆ ಮಾತ್ರ ಇಲ್ಲಿ ಯಶಸ್ವಿಯಾಗಿ ಜನರ ಮನದಲ್ಲಿ ಉಳಿಯಲು ಸಾಧ್ಯ. ರಾಜಕೀಯ ಜನರ ಸೇವೆಯಾಗಿ ಉಳಿಯಬೇಕು. ಸೆವೆ ಎಂಬುದು ಇಲ್ಲಿಲ್ಲ. ಇದರಿಂದ ರಾಜಕೀಯಕ್ಕೆ ಸೇರುವ ಮನಸ್ಸಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement