ಆಳಂದಕ್ಕೆ ರಾಜಕಾರಣಿಗಳ ದಂಡು
ಆಳಂದ: ಪ್ರಸ್ತುತ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರು ಮುಂದಿನ ರಾಜಕೀಯ ನಡೆ ಚರ್ಚಿಸಲು ಕೆಜೆಪಿ ಕಾರ್ಯಕರ್ತರು, ಅಭಿಮಾನಿಗಳ, ಬೆಂಬಲಿಗರ ಸಭೆ ಏ.1ರಂದು ಪಟ್ಟಣದ ಕೋರಳ್ಳಿ ಕ್ರಾಸ್ ಹತ್ತಿರದ ಸಿಬಿಎಸ್ಇ ಶಾಲೆಯಲ್ಲಿ ನಡೆಯಲಿದೆ.
ಶಾಸಕ ಬಿ.ಆರ್. ಪಾಟೀಲ್, ಕೆಜೆಪಿ ತಾಲೂಕಾಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ವಿಠ್ಠಲರಾವ್ ಪಾಟೀಲ್, ಮಲ್ಲೇಶಪ್ಪ ಬಿರಾದಾರ ಅನೇಕರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಸಭೆ: ಏ1ರಂದು ತಾಲೂಕಿನ ಕಡಗಂಚಿ, ಮುನ್ನಹಳ್ಳಿ ಖಜೂರಿಯಲ್ಲಿ ಬೀದರ್ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಧರಂಸಿಂಗ್ ಅವರ ಪರ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ. ಅಭ್ಯರ್ಥಿ ಧರ್ಮಸಿಂಗ್, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಆಗಮಿಸುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಮುಕ್ದುಮ ಅನ್ಸಾರಿ, ಮಾದನಹಿಪ್ಪರಗಾ ಬ್ಲಾಕ್ ಅಧ್ಯಕ್ಷ ಬಸವಂತರಾವ ಪಾಟೀಲ್ ತಿಳಿಸಿದ್ದಾರೆ.
ಜಗದೀಶ ಶೆಟ್ಟರ್ ಆಗಮನ: ಏ.1ರಂದು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತಪ್ಪ ಖೂಬಾ ಪರವಾಗಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿ ಗಣ್ಯರು ಆಗಮಿಸಿ ಪಟ್ಟಣದಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ರಮೇಶ ಲೋಹಾರ ಹೇಳಿದ್ದಾರೆ.