ಲಕ್ಷದೀಪೋತ್ಸವ
ಗುಲ್ಬರ್ಗ: ತಾಲೂಕಿನ ಅವರಾದ ಗುಡ್ಡದ ಸ್ವಾಮಿ ಸಮರ್ಥ ಮಂದಿರದಲ್ಲಿ ಏ.1ರಂದು ಸಂಜೆ 6 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರ ಟ್ರಸ್ಟ್ ಅಧ್ಯಕ್ಷ ಡಾ. ಜಗನಾಥ ವಿಜಾಪುರ, ಬಸವರಾಜ ಮುರಡಿ ತಿಳಿಸಿದರು. ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದಡಿ ನಡೆಸುತ್ತಿರುವ ಗೋ ಶಾಲೆ ಅಭಿವೃದ್ಧಿಗಾಗಿ ಲಕ್ಷದಿಪೋತ್ಸವ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ದೀಪೋತ್ಸವಕ್ಕೆ ಚಾಲನೆ ನೀಡುವರು. ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ, ಮುತ್ಯಾನ ಬಬಲಾದಿ ಗುರುಲಿಂಗ ಶಿವಯೋಗಿ, ಹಾಗರಗಿಯ ರೇವಣಸಿದ್ದ ಶಿವಾಚಾರ್ಯ, ಅವರಾದ ಚರಂತಿಮಠದ ಗುರುಬಸವ ದೇವರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ರಥೋತ್ಸವ ಇಂದು
ಗುಲ್ಬರ್ಗ: ಸದ್ಭಕ್ತರ ಉದ್ಧಾರ, ಲೋಕಕಲ್ಯಾಣಕ್ಕಾಗಿ 33 ದಿವಸ ಅನುಷ್ಠಾನಗೈದ ವರಕವಿ ಜಂಬಗಿ ಶರಣರ 33ನೇ ಪುಣ್ಯಾರಾಧನೆ ಹಾಗೂ 61ನೇ ಜಾತ್ರಾ ರಥೋತ್ವವ ಮಾತೋಶ್ರೀ ರತ್ನಮ್ಮ ಗುರುತಾಯಿ ನೇತೃತ್ವದಲ್ಲಿ ಮಾ.31 ರ ಕರಿಭೋಸಗಾದಲ್ಲಿ ನೆರವೇರಲಿದೆ. ಅಂದು ಬೆಳಗ್ಗೆ 8 ಗಂಟೆಗೆ ಪಲ್ಲಕ್ಕಿ, 11 ಗಂಟೆಗೆ ಅಗ್ನಿ ಪೂಜೆ, ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ. ನಂತರ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯ, ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಸುಲಫಲ ಮಠ ಡಾ.ಮಹಾಂತ ಶಿವಾಚಾರ್ಯರು ಸಭೆಯನ್ನು ಉದ್ಘಾಟಿಸುವರು. ಬಸವ ಯೋಗಾಶ್ರವು ಕೌಠಾ ಸಿದ್ಧರಾಮ ಶರಣ ಬೆಲ್ದಾಳ ಅಧ್ಯಕ್ಷತೆ ವಹಿಸುವರು. ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಎಂಎಲ್ಸಿ ಅಲ್ಲಂಪ್ರಭು ಪಾಟೀಲ, ಹಿರಿಯ ದಲಿತ ಮುಖಂಡ ಡಾ.ಶಿವರಾಂ ಮೋಘಾ, ಹೈಕಶಿ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಉಪನ್ಯಾಸ ನಾಳೆ
ಗುಲ್ಬರ್ಗ: ರಾಮಮಂದಿರ ದೇವಸ್ಥಾನ ಆಳಂದ ಸಮಿತಿಯಡಿ ರಾಮನವಮಿ ಉತ್ಸವ ಅಂಗವಾಗಿ ಪಂಡಿತ ಗೋಪಾಲಚಾರ್ಯ ಅಕಮಂಚಿರಿಂದ ಆಳಂದ ನಗರದ ರಾಮಮಂದಿರಲ್ಲಿ ಏ. 1ರಿಂದ 5ರವರೆಗೆ ಸಂಜೆ 5ರಿಂದ 7ರವರೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.